ಮಾರ್ಚ್ 28: ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಮಾರ್ಚ್24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾರ್ಚ್29 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.
ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ಭೋಜನವನ್ನು ಈ ದಿನವು ಗುರುತಿಸುತ್ತದೆ. ನಾವೆಲ್ಲರೂ ಸಮಾನರು ಎಂಬುದರ ಸಂಕೇತವಾಗಿ ನಾವು ವಿನಮ್ರರಾಗಿರಬೇಕು ಮತ್ತು ಪರಸ್ಪರರ ಪಾದಗಳನ್ನು ತೊಳೆಯುದರ ಮೂಲಕ ಸೇವಾ ಮನೋಭಾವನೆಗೆ ಸಿದ್ಧರಾಗಿರಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪಾಠವನ್ನು ಸಹ ಇದು ನೆನಪಿಸುತ್ತದೆ
ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಪ್ರಪಂಚಾದ್ಯಂತ ಎಲ್ಲಾ ಚರ್ಚುಗಳಲ್ಲಿ ಪಶ್ಚಾತ್ತಾಪದ ವಿಧಿ, ಪಾದ ಸ್ನಾನದ ವಿಧಿ, ಪರಮ ಪ್ರಸಾದ ವಿಧಿ ಹಾಗೂ ಪರಮ ಪ್ರಸಾದ ಪ್ರತಿಷ್ಠಾಪನೆ ಮತ್ತು ಆರಾಧನೆ ವಿಧಿಗಳನ್ನು ಆಚರಿಸಲಾಗುತ್ತದೆ.
ಹಾಗೇನೇ ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್ ಚರ್ಚಿನಲ್ಲಿ ಪವಿತ್ರ ಗುರುವಾರವನ್ನು ಮಾರ್ಚ್ 28 ರಂದು ಆಚರಿಸಲಾಯಿತು. ಪ್ರದಾನ ಧರ್ಮಗುರುಗಳಾಗಿ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಬಲಿ ಪೂಜೆಯನ್ನು ನೆರವೇರಿಸಿದರು. ಪ್ರಭು ಕ್ರಿಸ್ತರ ಪ್ರತಿನಿಧಿಯಾಗಿ, ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ರವರು ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು. ವಂದನಿಯ ಸ್ಟ್ಯಾನಿ ಪಿಂಟೋ ರವರು ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನವಾದ ಇಂದು ಅದರ ಮಹತ್ವವನ್ನು ಸಾರಿ ಹೇಳಿದರು,
ಸಹಾಯಕ ಧರ್ಮಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ವಂದನಿಯಾ ರೂಪೇಶ್ ತೌರೋರವರು ನಡೆಸಿಕೊಟ್ಟರು.
ಯೇಸುವಿನ ಕೊನೆಯ ಭೋಜನದ ಸಂಕೇತವಾಗಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ರೊಟ್ಟಿಯನ್ನು ವಿತರಿಸಲಾಯಿತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…