ಜನ ಮನದ ನಾಡಿ ಮಿಡಿತ

Advertisement

ಥ್ರೆಡ್ಸ್: ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಅಪ್ಲಿಕೇಶನ್; ಎಲಾನ್​ ಮಸ್ಕ್​ಗೆ ಮೆಟಾ ಸವಾಲು

ಮೆಟಾ ಸಂಸ್ಥೆಯು ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆಪ್ ಅನ್ನು​ ಅನಾವರಣಗೊಳಿಸಿದ್ದು, ವಿಶ್ವದ 100 ದೇಶಗಳಲ್ಲಿ ಸದ್ಯಕ್ಕೆ ಲಭ್ಯವಿದೆ. ಯುರೋಪ್​ ರಾಷ್ಟ್ರಗಳಲ್ಲಿ ಇದು ಬಿಡುಗಡೆಯಾಗಿಲ್ಲ.

ಲಂಡನ್: ಜನಪ್ರಿಯ ಮೈಕ್ರೋಬ್ಲಾಗಿಂಗ್​ ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​ ದಿನಕ್ಕೊಂದು ಷರತ್ತು, ನಿಯಮ ಹಾಕುತ್ತಿದ್ದು, ಬಳಕೆದಾರರ ತಲೆ ಕೆಡಿಸಿದೆ.

ಮೊದಲು ಬ್ರಿಟನ್​ನಲ್ಲಿ ಆಪಲ್ ಮತ್ತು ಗೂಗಲ್​ ಆಂಡ್ರಾಯ್ಡ್​ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲಭ್ಯವಿತ್ತು. ಇದೀಗ ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಅಧಿಕ ದೇಶಗಳಲ್ಲಿ ಬಳಕೆಗೆ ಸಿಗಲಿದೆ.

ಥ್ರೆಡ್ಸ್‌ ವಿಶೇಷತೆಗಳೇನು?:
ಎಲಾನ್​ ಮಸ್ಕ್​ ದೈನಂದಿನ ಟ್ವಿಟರ್​ ಬಳೆಕೆಯ ಮೇಲೂ ಮಿತಿ ಹೇರಿದ್ದು, ಅದಕ್ಕೆ ಪರ್ಯಾಯವಾಗಿ ಮೆಟಾ ಸಂಸ್ಥೆಯು ಥ್ರೆಡ್ಸ್‌​ ಅನ್ನು ಬಿಡುಗಡೆ ಮಾಡಿದೆ ಎಂದೇ ಹೇಳಲಾಗಿದೆ. ಮೆಟಾ ಒಡೆತನದ ಥ್ರೆಡ್ಸ್‌​ ಟ್ವಿಟರ್​​ನಂತೆ ಫೋಟೋ, ವಿಡಿಯೋ, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಈಗಿರುವ ಇನ್​​ಸ್ಟಾಗ್ರಾಮ್​ ಖಾತೆ ಮೂಲಕವೇ ಡೌನ್‌​ಲೋಡ್​ ಮಾಡಿಕೊಂಡು ಬಳಕೆ ಮಾಡಬಹುದು. ಥ್ರೆಡ್ಸ್‌​​ ಆಯಪ್​ನಲ್ಲಿ ಲೈಕ್​, ಪೋಸ್ಟ್​, ರೀಪೋಸ್ಟ್​, ಎಡಿಟ್​, ರಿಸೀವ್ಡ್​​ ಲೈಕ್ಸ್​ ಅಂಡ್​ ಕಾಮೆಂಟ್​ ಸೆಕ್ಷನ್​ ನೀಡಲಾಗಿದೆ. ಥೇಟ್ ಟ್ವಿಟರ್​ನಂತೆಯೇ ರೂಪಿಸಲಾಗಿದೆ.

ಇಲ್ಲಿ ಫೋಟೋ, ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಅದಕ್ಕೆ ಬರುವ ಕಾಮೆಂಟ್​, ಲೈಕ್ಸ್​ಗಳು ಕೆಳಭಾಗದಲ್ಲಿ ಕಾಣಸಿಗುತ್ತವೆ. ಇಲ್ಲಿ ಇಂದಿನ ವಿಷಯಗಳ ಚರ್ಚೆಯ ಜೊತೆಗೆ ನಾಳೆಗೆ ಟ್ರೆಂಡ್​ ಆಗುವ ಸಬ್ಜೆಕ್ಸ್​ ಬಗ್ಗೆಯೂ ಚರ್ಚೆ ಮಾಡಬಹುದು. ಹೀಗಾಗಿ ಇದು ಇನ್​ಸ್ಟಾಗ್ರಾಮ್​ನ ಮುಂದುವರಿದ ಭಾಗ ಎಂದೇ ಹೇಳಬಹುದು ಎಂದು ಕಂಪನಿ ತಿಳಿಸಿದೆ. ಥ್ರೆಡ್ಸ್‌​ನಲ್ಲಿ 500 ಅಕ್ಷರಗಳವರೆಗೆ ಒಂದು ಪೋಸ್ಟ್‌ ಹಾಕಬಹುದು. ಟ್ವಿಟರ್​ನಲ್ಲಿ 280 ಅಕ್ಷರ ಮಿತಿಗಿಂತ ಇದು ಹೆಚ್ಚು. ಐದು ನಿಮಿಷಗಳ ಉದ್ದದಷ್ಟು ಲಿಂಕ್‌ಗಳು, ಫೋಟೋಗಳು ಮತ್ತು ವಿಡಿಯೊಗಳನ್ನು ಪೋಸ್ಟ್​ ಮಾಡಬಹುದು. ಇನ್​ಸ್ಟಾಗ್ರಾಮ್​ ಖಾತೆಯಿಂದಲೇ ಇದರಲ್ಲಿ ಲಾಗ್​​ಇನ್​ ಆಗಬಹುದು. ಹೊಸದಾಗಿ ಲಾಗ್​​​ಇನ್​ ಬೇಕಾಗಿಲ್ಲ. ಡೇಟಾ ಲೀಕ್​ ಆಗುವುದನ್ನು ತಡೆಯುವ ಕ್ರಮ ಎಂಬುದು ಕಂಪನಿಯ ಹೇಳಿಕೆ.

ಆರ್ಥಿಕ ಸವಾಲಿನ ಕಾರಣದಿಂದ ಮೆಟಾ ಸಂಸ್ಥೆಯ ಹಲವಾರು ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡಿ, ಈಗ ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆಯಪ್​ ಪರಿಚಯಿಸಿದ್ದ ಕ್ರಮವನ್ನು ಹಲವರು ಟೀಕಿಸಿದ್ದಾರೆ. ಟೆಕ್​ ಉದ್ಯಮ ಹೊಡೆತಕ್ಕೀಡಾದ ಸಂದರ್ಭದಲ್ಲಿ ಥ್ರೆಡ್ಸ್‌ ಯಾವ ರೀತಿಯ ಬೆಳವಣಿಗೆ ಕಾಣಲಿದೆ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!