ಮೆಟಾ ಸಂಸ್ಥೆಯು ಟ್ವಿಟರ್ ಮಾದರಿಯ ಥ್ರೆಡ್ಸ್ ಆಪ್ ಅನ್ನು ಅನಾವರಣಗೊಳಿಸಿದ್ದು, ವಿಶ್ವದ 100 ದೇಶಗಳಲ್ಲಿ ಸದ್ಯಕ್ಕೆ ಲಭ್ಯವಿದೆ. ಯುರೋಪ್ ರಾಷ್ಟ್ರಗಳಲ್ಲಿ ಇದು ಬಿಡುಗಡೆಯಾಗಿಲ್ಲ.
ಲಂಡನ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ದಿನಕ್ಕೊಂದು ಷರತ್ತು, ನಿಯಮ ಹಾಕುತ್ತಿದ್ದು, ಬಳಕೆದಾರರ ತಲೆ ಕೆಡಿಸಿದೆ.
ಮೊದಲು ಬ್ರಿಟನ್ನಲ್ಲಿ ಆಪಲ್ ಮತ್ತು ಗೂಗಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲಭ್ಯವಿತ್ತು. ಇದೀಗ ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಅಧಿಕ ದೇಶಗಳಲ್ಲಿ ಬಳಕೆಗೆ ಸಿಗಲಿದೆ.
ಥ್ರೆಡ್ಸ್ ವಿಶೇಷತೆಗಳೇನು?:
ಎಲಾನ್ ಮಸ್ಕ್ ದೈನಂದಿನ ಟ್ವಿಟರ್ ಬಳೆಕೆಯ ಮೇಲೂ ಮಿತಿ ಹೇರಿದ್ದು, ಅದಕ್ಕೆ ಪರ್ಯಾಯವಾಗಿ ಮೆಟಾ ಸಂಸ್ಥೆಯು ಥ್ರೆಡ್ಸ್ ಅನ್ನು ಬಿಡುಗಡೆ ಮಾಡಿದೆ ಎಂದೇ ಹೇಳಲಾಗಿದೆ. ಮೆಟಾ ಒಡೆತನದ ಥ್ರೆಡ್ಸ್ ಟ್ವಿಟರ್ನಂತೆ ಫೋಟೋ, ವಿಡಿಯೋ, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಈಗಿರುವ ಇನ್ಸ್ಟಾಗ್ರಾಮ್ ಖಾತೆ ಮೂಲಕವೇ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು. ಥ್ರೆಡ್ಸ್ ಆಯಪ್ನಲ್ಲಿ ಲೈಕ್, ಪೋಸ್ಟ್, ರೀಪೋಸ್ಟ್, ಎಡಿಟ್, ರಿಸೀವ್ಡ್ ಲೈಕ್ಸ್ ಅಂಡ್ ಕಾಮೆಂಟ್ ಸೆಕ್ಷನ್ ನೀಡಲಾಗಿದೆ. ಥೇಟ್ ಟ್ವಿಟರ್ನಂತೆಯೇ ರೂಪಿಸಲಾಗಿದೆ.
ಇಲ್ಲಿ ಫೋಟೋ, ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಅದಕ್ಕೆ ಬರುವ ಕಾಮೆಂಟ್, ಲೈಕ್ಸ್ಗಳು ಕೆಳಭಾಗದಲ್ಲಿ ಕಾಣಸಿಗುತ್ತವೆ. ಇಲ್ಲಿ ಇಂದಿನ ವಿಷಯಗಳ ಚರ್ಚೆಯ ಜೊತೆಗೆ ನಾಳೆಗೆ ಟ್ರೆಂಡ್ ಆಗುವ ಸಬ್ಜೆಕ್ಸ್ ಬಗ್ಗೆಯೂ ಚರ್ಚೆ ಮಾಡಬಹುದು. ಹೀಗಾಗಿ ಇದು ಇನ್ಸ್ಟಾಗ್ರಾಮ್ನ ಮುಂದುವರಿದ ಭಾಗ ಎಂದೇ ಹೇಳಬಹುದು ಎಂದು ಕಂಪನಿ ತಿಳಿಸಿದೆ. ಥ್ರೆಡ್ಸ್ನಲ್ಲಿ 500 ಅಕ್ಷರಗಳವರೆಗೆ ಒಂದು ಪೋಸ್ಟ್ ಹಾಕಬಹುದು. ಟ್ವಿಟರ್ನಲ್ಲಿ 280 ಅಕ್ಷರ ಮಿತಿಗಿಂತ ಇದು ಹೆಚ್ಚು. ಐದು ನಿಮಿಷಗಳ ಉದ್ದದಷ್ಟು ಲಿಂಕ್‌ಗಳು, ಫೋಟೋಗಳು ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡಬಹುದು. ಇನ್ಸ್ಟಾಗ್ರಾಮ್ ಖಾತೆಯಿಂದಲೇ ಇದರಲ್ಲಿ ಲಾಗ್ಇನ್ ಆಗಬಹುದು. ಹೊಸದಾಗಿ ಲಾಗ್ಇನ್ ಬೇಕಾಗಿಲ್ಲ. ಡೇಟಾ ಲೀಕ್ ಆಗುವುದನ್ನು ತಡೆಯುವ ಕ್ರಮ ಎಂಬುದು ಕಂಪನಿಯ ಹೇಳಿಕೆ.
ಆರ್ಥಿಕ ಸವಾಲಿನ ಕಾರಣದಿಂದ ಮೆಟಾ ಸಂಸ್ಥೆಯ ಹಲವಾರು ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡಿ, ಈಗ ಟ್ವಿಟರ್ ಮಾದರಿಯ ಥ್ರೆಡ್ಸ್ ಆಯಪ್ ಪರಿಚಯಿಸಿದ್ದ ಕ್ರಮವನ್ನು ಹಲವರು ಟೀಕಿಸಿದ್ದಾರೆ. ಟೆಕ್ ಉದ್ಯಮ ಹೊಡೆತಕ್ಕೀಡಾದ ಸಂದರ್ಭದಲ್ಲಿ ಥ್ರೆಡ್ಸ್ ಯಾವ ರೀತಿಯ ಬೆಳವಣಿಗೆ ಕಾಣಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…