ಇಳಕಲ್ 1- ತಾಲೂಕಿನ ಕರಡಿ ಗ್ರಾಮದ ಹೊರವಲಯದಲ್ಲಿ ಇರುವ ಮೇವಿನ ಬಣವೆಗಳಿಗೆ ಬೆಂಕಿ ಹತ್ತಿ ಅಪಾರ ನಷ್ಟವಾಗಿದೆ

ಗ್ರಾಮದ ಸಂಗಪ್ಪ ಬಾಲಿಹಾಳ ಎಂಬ ರೈತರ ಹೊಲದಲ್ಲಿ ಸಂಗ್ರಹಿಸಿದ್ದ ಮೇವಿನ ಬಣವೆಗಳು ವಿದ್ಯುತ್ ಶಾಟ್ ಸರ್ಕೂಟದಿಂದಾಗಿ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿವೆ ಇಳಕಲ್ ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿತು ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿತು ಎಂದು ಹೇಳಲಾಗಿದೆ. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ಐ ಸತ್ತಿಗೋಳ ತನಿಖೆ ನಡೆಸಿದ್ದಾರೆ.



