ಬಜಪೆ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜು ಪ್ರಥಮ, ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ದ್ವಿತೀಯ, ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು ತೃತೀಯ ಪ್ರಶಸ್ತಿ ಪಡೆದವು.
ಪುರುಷರ ವಿಭಾಗದಲ್ಲಿ ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪ್ರಥಮ, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜು ದ್ವಿತೀಯ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ತೃತೀಯ ಪ್ರಶಸ್ತಿಯನ್ನು ಪಡೆದವು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು ಪ್ರಥಮ, ಸೈಂಟ್ ಅಲೋಸಿಯಸ್ ಕಾಲೇಜು ದ್ವಿತೀಯ, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜು ತೃತೀಯ ಪ್ರಶಸ್ತಿ ಪಡೆದವು.
ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಎಂ. ವಿವೇಕ್ ಆಳ್ವ, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಕುಮಾರ ಶೆಟ್ಟಿ, ಉದ್ಯಮಿ ಧನಂಜಯ ರೈ, ವೃಂದಾ ಎಸ್. ಹೆಗ್ಡೆ, ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ., ಜಯರಾಮ ರೈ, ಶೆಲ್ವಂದ್ರನ್, ವಿವಿಯ ಶಂಕರ ನಾರಾಯಣ, ಕರಾಟೆ ಶಿಕ್ಷಕರಾದ ಈಶ್ವರ ಕಟೀಲ್, ಮೋರ್ಗನ್ ವಿಲಿಯಂ, ಚಂದ್ರಹಾಸ ಅಂಚನ್, ಸುರೇಶ್, ವಿಕ್ಟರ್, ಶಿವಪ್ರಸಾದ್, ನಾಗರಾಜ್, ನಿತಿನ್, ವಿದ್ಯಾರ್ಥಿ ಸಂಘದ ದೀಪಕ್, ಕೃಷ್ಣರಾಜ ಐತಾಳ್, ಪುಷ್ಪರಾಜ ಶೆಟ್ಟಿ, ಬಿ. ನಿಶಾ, ಆಶಿಕ್, ಜಯಲಕ್ಷ್ಮೀ ಮತ್ತಿತರರಿದ್ದರು.



