ಇಳಕಲ್ : ಬಾಗಲಕೋಟೆ ಲೋಕಸಭಾ ಚುನಾವಣೆಯ ನಿಮಿತ್ಯ
ಕಾಶಪ್ಪನವರ ನಿವಾಸಕ್ಕೆ ಧಿಡೀರ ಭೇಟಿ ನೀಡಿ ಚುನಾವಣೆಯ ಪ್ರಚಾರದ ಕುರಿತು ಸುಧೀರ್ಘವಾಗಿ ಚರ್ಚಿಸಿದರು.

ಈ ಭಾರಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯಾದ ಸಂಯುಕ್ತಾ ಶಿವಾನಂದ ಪಾಟೀಲ ಅವರನ್ನು ಕಾಂಗ್ರೆಸ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡುವುದರ ಮೂಲಕ ಆಯ್ಕೆ ಮಾಡಿ ಸಂಸತ್ತಿಗೆ ಕಳಿಸೋಣ ಎಂದು ಹುನಗುಂದ ಮತಕ್ಷೇತ್ರದ ಶಾಸಕ,ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಡಾ || ವಿಜಯಾನಂದ ಎಸ್.ಕಾಶಪ್ಪನವರು ಹೇಳಿದರು.
ಪತ್ರಕರ್ತರು ಹೇಳಿದ ಪ್ರಶ್ನೆಗೆ ಸಚಿವ ಶಿವಾನಂದ ಪಾಟೀಲ ಅವರು
ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವಿಲ್ಲ ,ಅಭಿಪ್ರಾಯ ಪಕ್ಷದಲ್ಲಿ ಇರುವುದು ಸಹಜ,ಆದರೆ ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ,ಅದು ಮುಗಿದ ಅಧ್ಯಾಯ ನಾವೆಲ್ಲರೂ ಒಕ್ಕಟ್ಟಾಗಿದ್ದೇವೆ
ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.



