ಮಂಗಳೂರಿನ ಕುಲಶೇಖರದಲ್ಲಿರುವ ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ ನುಡಿಸುವುದಕ್ಕೆ ನೆರವಾಗುವ ಸಂಪುಟ 2′ ರ ನೂತನ ಕೃತಿ ಕಳೆದ ವಾರ ಮಂಗಳೂರಿನಲ್ಲಿ ಲೋಕಾರ್ಪಣಗೊಂಡಿತು.
ಉದ್ಯಮಿ, ಸಮಾಜಸೇವಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಶ್ರೀಮತಿ ಬೆನೆಟ್ ನವಿತಾ ಕ್ರಾಸ್ತ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಸಂಗೀತ ಶಿಕ್ಷಕ ಹಾಗು ರಂಗ ಕಲಾವಿದ ವಿಜಯ್ ನೊರೊನ್ಹ ಅವರ ಹಲವು ದಶಕಗಳ ಅಧ್ಯಾಪನದ ಅನುಭವ ಮತ್ತು ವಾದನರಂಗದ ಪರಿಶ್ರಮ ಪಾಂಡಿತ್ಯಗಳು ಈ ಕೃತಿಯ ಪ್ರತಿ ಪುಟವನ್ನೂ ಸಮೃದ್ಧಗೊಳಿಸಿವೆ; ಸಂಗೀತ ಕಲಿಕಾರ್ಥಿಗಳ ಕೈಬೆರಳು ಹಿಡಿದು ಮುನ್ನಡೆಸುವ ಸ್ಪಷ್ಟ ಸೂಚನೆಗಳು ಮತ್ತು ಉತ್ತಮ ಮಾರ್ಗದರ್ಶನ ವನ್ನು ಕೃತಿಯು ಒದಗಿಸುತ್ತದೆ” ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಸಂಗೀತಗಾರ ಹಾಗೂ ಶಾಲೋಮ್ ರೆಕಾರ್ಡಿಂಗ್ ಸ್ಟುಡಿಯೋ ಮಾಲಿಕರಾದ ಡಿಜೆ ರಾಕೇಶ್ ಜೋಸೆಫ್ ಡಿಸೋಜ ಅವರು ” ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರೂ ಉತ್ತಮ ಸಂಗೀತಗಾರರೂ ಆಗಿರುವ ಕೃತಿಕಾರ ವಿಜಯ್ ನೊರೊನ್ಹ ಅವರು ಎಲ್ಲ ಹಂತದ ಸಂಗೀತಾರ್ಥಿಗಳು ತಮ್ಮ ಮೆಚ್ಚಿನ ರಾಗಗಳಲ್ಲಿ ಪ್ರಭುತ್ವ ಸಾಧಿಸಲು ಅವಶ್ಯವಿರುವ ಕೌಶಲ್ಯ ಮತ್ತು ತಂತ್ರಗಳನ್ನು ಈ ಕೃತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಸಾರ್ವಕಾಲಿಕ ಜನಪ್ರಿಯತೆಯ ಮಧುರ ಗೀತೆಗಳಿಂದ ಸಮಕಾಲೀನ ಸೂಪರ್ ಹಿಟ್ ಗೀತೆಗಳವರೆಗೆ, ಬೇರೆ ಬೇರೆ ತಲೆಮಾರಿನ, ಬೇರೆ ಬೇರೆ ಭಾಷೆಯ ವೈವಿಧ್ಯಮಯ ಹಾಡುಗಳ ಪಾಶ್ಚಿಮಾತ್ಯ ನೊಟೇಶನ್ ಗಳನ್ನು ಒದಗಿಸುವ ಮೂಲಕ ಉದಯೋನ್ಮುಖ ಸಂಗೀತಗಾರರಿಗೆ ಈ ಕ್ರತಿಯು ಬಹು ಉಪಯುಕ್ತವಾಗಿದೆ” ಎಂದರು.
ಶ್ರೀ ಜಯರಾಜ್ ರೇಗೊ ಅತಿಥಿಗಳನ್ನು ಸ್ವಾಗತಿಸಿ, ಕೃತಿಯನ್ನು ಪರಿಚಯಿಸಿದರು.
ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರಾದ ವಿಜಯ್ ನೊರೊನ್ಹರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…