ದಕ್ಷಿಣ ಕನ್ನಡ : ಮಂಗಳೂರಿನ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣಾ ಘಟಕ ಪಚ್ಛನಾಡಿಯಲ್ಲಿ ತ್ಯಾಜ್ಯ ದುರಂತ ಸಂಭವಿಸಿ, ಮಂದಾರ ಎಂಬ ಕೃಷಿ ಪ್ರಧಾನ ಪ್ರದೇಶ, ಹಚ್ಚ ಹಸಿರಿನ ಸುಂದರ ತಾಣ, ಸಂಪೂರ್ಣ ನಾಶವಾಗಿ ಮಂದಾರ ಜನತೆಯ ಬದುಕನ್ನು ನಾಶ ಮಾಡಿ ಜನರ ನೆಮ್ಮದಿಯ ಬದುಕನ್ನ ಕಿತ್ತುಕೊಂಡ ತ್ಯಾಜ್ಯ ದುರಂತ ಸಂಭವಿಸಿ ಸುಮಾರು 5 ವರ್ಷಗಳು ಸಮೀಪಿಸುತ್ತಿವೆ, ಆದರೆ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಮರೀಚಿಕೆಯಾಗಿ ಉಳಿದಿದೆ.
ತ್ಯಾಜ್ಯ ದುರಂತದ ಸಂತ್ರಸ್ತರು ಪೂರ್ಣಪ್ರಮಾಣದ ಪರಿಹಾರಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ದಾರೆ ವಿನಹ, ಯಾವುದೇ ಪ್ರಯೋಜನವಾಗಿಲ್ಲ, ಮಾನಸಿಕವಾಗಿ ನೊಂದ ಹಲವು ಸಂತ್ರಸ್ತರು ಈಗಾಗಲೇ ಮರಣ ಹೊಂದಿದ್ದಾರೆ, ಹಲವರು ಅನಾರೋಗ್ಯ ಪೀಡಿತರಾಗಿದ್ದಾರೆ, ಹಲವರು ಮಧ್ಯಂತರ ಪರಿಹಾರ ಪಡಕೊಂಡು, ಊರು ಬಿಟ್ಟು ಬೇರೆಡೆ ವಾಸವಾಗಿದ್ದಾರೆ ಆದರೆ ಸಂತ್ರಸ್ತರು ನೆಮ್ಮದಿಯಾಗಿಲ್ಲ ಎನ್ನುವುದು ವಾಸ್ತವ ಸತ್ಯ, ಕೆಲವೇ ಕೆಲವು ಮಂದಿ ಸಂಬಂಧ ಪಟ್ಟವರು ಸಂತ್ರಸ್ತ ನಿಲಯದಲ್ಲಿ ವಾಸವಾಗಿದ್ದಾರೆ, ಅಲ್ಲೂ ಮೂಲಭೂತ ಸೌಕರ್ಯಗಳಿಲ್ಲ ಎಂದು ವರದಿಯಾಗಿದೆ, ಯಾರನ್ನು ಹೇಳಿಯೂ ಪ್ರಯೋಜನವಿಲ್ಲ ಎನ್ನುತ್ತಾರೆ ಸಂತ್ರಸ್ತರು.
ಈ ಮಧ್ಯೆ ಸಂತ್ರಸ್ತರಲ್ಲಿ ಹಲವು ಮಂದಿ ನಮಗೆ ಪರಿಹಾರ ಬೇಕಾಗಿಲ್ಲ ನಮಗೆ ನಮ್ಮ ಜಾಗ ಮೊದಲಿನಂತೆ ಮಾಡಿ ನಮಗೆ ಹಿಂತಿರುಗಿಸಿ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ ಎಂದು ಸಂತ್ರಸ್ತ ಮೂಲಗಳಿಂದ ಮಾಹಿತಿ ಇದೆ, ಹಲವು ಮಂದಿ ನಮಗೆ ಪೂರ್ಣ ಪರಿಹಾರ ಬೇಗ ಕೊಡಿ ಎನ್ನುತ್ತಿದ್ದಾರೆ, ಈ ಮಧ್ಯೆ ಅಧಿಕಾರಿಗಳು ಗೊಂದಲಕ್ಕೀಡಾದಂತೆ ತೋರುತ್ತಿದ್ದು ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಂತೆ ತೋರುತ್ತಿಲ್ಲ, ಸುಮಾರು ಮೂರು ವರ್ಷಗಳ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿ ಮಾಧ್ಯಮ ಪ್ರಕಟಣೆಯನ್ನು ಇಲಾಖೆ ನೀಡಿತು, ನಂತರದಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ, ಪ್ರಸ್ತುತ ಪ್ರಕಟಣೆ ಅವಧಿ ಮೀರಿದ್ದು, ಯಾವುದೇ ಪ್ರಕ್ರಿಯೆ ಮುಂದುವರಿಯದ ಕಾರಣ ಈಗ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕಟಣೆಗೆ ಯಾವುದೇ ಮಾನ್ಯತೆ ಇಲ್ಲ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ .
ಈ ಮಧ್ಯೆ ಹಲವು ಸಂತ್ರಸ್ತರು ಪೂರ್ಣ ಪ್ರಮಾಣದ ಪರಿಹಾರ ಸಿಗದಿರುವುದರಿಂದ ಬೇಸತ್ತು, ನಮಗೆ ಪರಿಹಾರದ ಅಗತ್ಯವಿಲ್ಲ ನಮಗೆ ನಮ್ಮ ಭೂಮಿ ವಾಪಸು ನೀಡಿ ಎನ್ನುತ್ತಿದ್ದಾರೆ, ಇನ್ನು ಹಲವರು ನಮಗೆ ಪೂರ್ಣ ಪ್ರಮಾಣದ ಪರಿಹಾರ ಬೇಗ ಕೊಡಿ ಎನ್ನುತ್ತಿದ್ದಾರೆ, ಹಲವರು ಇನ್ನು ಹಲವು ಸಂತ್ರಸ್ತರು ಅಂದು ನೀಡಿದ ಮೌಕಿಕ ಭರವಸೆಯಂತೆ ಈಗ ವಾಸಿಸುತ್ತಿರುವ ವಸತಿ ಸಂಕೀರ್ಣ ಉಚಿತವಾಗಿ ನೀಡಿ ಎನ್ನುತ್ತಿದ್ದಾರೆ, ನಮ್ಮ ಧಾರ್ಮಿಕ ನಂಬಿಕೆಗಳು ತ್ಯಾಜ್ಯ ದುರಂತದಲ್ಲಿ ನಾಶವಾಗಿದ್ದು ಮರು ಸ್ಥಾಪಿಸಿ ಎಂದು ದಂಬಾಲು ಬಿದ್ದಿದ್ದಾರೆ, ಹಲವು ಸಂತ್ರಸ್ತರು ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಮೌನವಾಗಿದ್ದಾರೆ, ಹಲವು ಸಂತ್ರಸ್ತರು ಅನಾರೋಗ್ಯ ಪೀಡಿತರಾಗಿದ್ದಾರೆ, ಒಟ್ಟಾರೆಯಾಗಿ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತರ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವಂತೆ ತೋರುತ್ತಿಲ್ಲ ಸಂತ್ರಸ್ತರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಪರಸ್ಪರ ಅಪನಂಬಿಕೆ ಇದ್ದಂತೆ ತೋರುತ್ತಿದ್ದು, ಅಲ್ಲದೆ ದಿನ ಕಳೆದಂತೆ ಒಬ್ಬೊಬ್ಬರು ಒಂದೊಂದು ರೀತಿಯ ಬೇಡಿಕೆ ಇಡುತ್ತಿರುವುದು ಸಮಸ್ಯೆ ಹೆಚ್ಚಿಸಲು ಇನ್ನೊಂದು ಕಾರಣ ಎನ್ನಲಾಗಿದ್ದು, ಈ ಮಧ್ಯೆ ಹಲವರು ನಾವು ಕೂಡ ಸಂತ್ರಸ್ತರು ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದ್ದು ಈ ಬಗ್ಗೆ ಗಮನಹರಿಸಬೇಕಿದೆ .
ಒಟ್ಟಾರೆಯಾಗಿ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತರಿಗೆ ನೆಮ್ಮದಿ ದೊರೆಯಲಿ, ಜೀವನ ಮೊದಲಿನಂತಾಗಲಿ, ಎನ್ನುವುದು ನಮ್ಮ ಆಶಯ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…