ಕಡಬ, ಎ. 13: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವ ಸ್ಥಾನದಲ್ಲಿ 63ನೇ ವರ್ಷದ ಏಕಾಹ ಭಜನ ಮಹೋತ್ಸವವು ಶುಕ್ರವಾರ ಮುಂಜಾನೆ ಆರಂಭಗೊಂಡು ಶನಿವಾರ ಬೆಳಿಗ್ಗೆ ವರೆಗೆ ನಡೆಯಿತು.
ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನೆಗೆ ಚಾಲನೆ ನೀಡಿದರು.
ಅ ಬಳಿಕ ಕಡಬ ದುರ್ಗಾಂಬಿಕಾ ಭಜನ
ಮಂಡಳಿಯ ಸದಸ್ಯರು ಭಜನ ಸೇವೆ ನೆರವೇರಿಸಿದರು. ಬಳಿಕ ವಿವಿಧ ಭಜನ ಸಂಘಗಳ ಸದಸ್ಯರಿಂದ ಭಜನ ಸೇವೆ ನಡೆಯಿತು. ಸಂಜೆ ದುರ್ಗಾಪೂಜೆ ನೆರವೇರಿತು. ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳನ್ನು ಗಣಪತಿ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಶ್ರೀ ದೇವರಿಗೆ ಉಲ್ಪೆ ಸಮರ್ಪಣೆ ನಡೆಯಿತು.
ದೈವಜ್ಞ ಸುಬ್ರಹ್ಮಣ್ಯ ಬೈಪಾಡಿತ್ತಾಯ ಕೆಂಚಭಟ್ರೆ, ದೇವಸ್ಥಾನದ ಅರ್ಚಕ ಪ್ರಶಾಂತ ಕೆದಿಲಾಯ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು, ಸೀತಾರಾಮ್ ಗೌಡ ಪೊಸವಳಿಕೆ ಡಾ|ರವೀಂದ್ರ ಮಲ್ಯ ಬ್ರಹ್ಮಕಲಶೋತ್ಸವ ಸಮಿತಿಯ ಕೃಷ್ಣ ಶೆಟ್ಟಿ ಕಡಬ, ಏಕಾಹ ಸಮಿತಿಯ ಅಧ್ಯಕ್ಷ ಕಿಶನ್ ಕುಮಾರ್ ರೈ ಪೆರಿಯಡ್ಕ ಗುತ್ತು, ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಜತೆ ಕಾರ್ಯದರ್ಶಿ ರಾಕೇಶ್ ಪೆಲತ್ತೋಡಿ, ಕೋಶಾಧಿಕಾರಿ ಸೀತಾರಾಮ ಗೌಡ ಎ., ಕಡಬ ಎಸ್‌ಐ ಅಭಿನಂದನ ಎಂ.ಎಸ್., ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನ್ಯಾಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ
ಸಮಿತಿ ಮಾಜಿ ಅಧ್ಯಕ್ಷ ಮುತ್ತುಕುಮಾರ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ನ್ಯಾಕ್ ಮೇಲಿನಮನೆ, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಅಧ್ಯಕ್ಷ ರವಿರಾಜ್ ಶೆಟ್ಟಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಪ್ರಮುಖರಾದ ಅಶೋಕ್ ಕುಮಾರ್ ಪಿ., ಪ್ರಕಾಶ್ ಎನ್.ಕೆ., ಅಜಿತ್ ರೈ ಆರ್ತಿಲ, ಮೋನಪ್ಪ ಗೌಡ ನಾಡೋಳಿ, ವಿಶ್ವನಾಥ ರೈ ಪೆರ್ಲ, ಪ್ರಮೋದ್ ರೈ ನಂದುಗುರಿ, ಶಿವಪ್ರಸಾದ್ ರೈ ಮೈಲೇರಿ, ಯಶೋದರ ಪೂವಳ, ಸವಿತಾ ಕಾಮತ್, ನಾಗೇಶ್ ಕಾಮತ್, ಜಿನ್ನಪ್ಪ ಸಾಲಿಯಾನ್, ರಾಧಾಕೃಷ್ಣಕೋಲ್ಪೆ,ಮುಂತಾದ ವರು ಉಪಸ್ಥಿತರಿದ್ದರು.
.
ಜೆಸಿಐ ಕಡಬ ಕದಂಬ ಘಟಕದ ವತಿಯಿಂದ ಭಕ್ತಾದಿಗಳಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಸ್.ಅಂಗಾರ ಅವರು ಚಾಲನೆ ನೀಡಿದರು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ಮಾಧ್ಯಮ ಲೋಕದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ಆಡಳಿತ…
ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ. ಆರ್ಥಿಕ…
ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದೆ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಕೂಟರ್ ಸವಾರನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬೆಟ್ಟಂಪಾಡಿ ನಿವಾಸಿ…
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…