ಇತರೆ

ವಿಶೇಷ ಚೇತನರರು, 85 ವರ್ಷ ಮೇಲ್ಪಟ್ಟ 6100 ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ : ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ.

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಲಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದ 6100 ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ ತಿಳಿಸಿದರು.


ಅವರು ಇಂದು ಕಾಪು ತಾಲೂಕಿನ ಕಲ್ಯಾ ಗ್ರಾಮದ ವಯಸ್ಕ ಮತದಾನರ ಮನೆಯಲ್ಲಿ ನಡೆದ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ 4474, ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1626 ಸೇರಿದಂತೆ ಒಟ್ಟು 6100 ಮತದಾರರಿಗೆ ಮತದಾನ ಮಾಡಲು ಏಪ್ರಿಲ್ 13 ರಿಂದ 17 ರವರೆಗೆ ಅವಕಾಶ ಕಲ್ಪಿಸಲಾಗುವುದು ಎಂದರು
ಉಡುಪಿ ಯಲ್ಲಿ 1057 ವಯಸ್ಕ ಮತದಾರರು 216 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ, ಕುಂದಾಪುರದಲ್ಲಿ 764 ವಯಸ್ಕ ಮತದಾರರು 197 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16, ರವರೆಗೆ, ಕಾಪು ಕ್ಷೇತ್ರದಲ್ಲಿ 851 ವಯಸ್ಕ ಮತದಾರರು 250 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ 15 ರವರೆಗೆ , ಕಾರ್ಕಳ ಕ್ಷೇತ್ರದಲ್ಲಿ 854 ವಯಸ್ಕ ಮತದಾರರು 285 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ 15 ರವರೆಗೆ, ಚಿಕ್ಕಮಗಳೂರು 91 ವಯಸ್ಕ ಮತದಾರರು 28 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ , ಮೂಡುಗೆರೆ ಯಲ್ಲಿ 237 ವಯಸ್ಕ ಮತದಾರರು 95 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 16 ರವರೆಗೆ, ತರಿಕೇರೆಯಲ್ಲಿ 309 ವಯಸ್ಕ ಮತದಾರರು 123 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 17 ರವರೆಗೆ, ಶೃಂಗೇರಿ ಯಲ್ಲಿ 501 ವಯಸ್ಕ ಮತದಾರರು 247 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 16 ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮನೆ ಮನೆ ಮತದಾನಕ್ಕೆ ಅಧಿಕಾರಿಗಳ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಬಿ.ಎಲ್.ಓ. ಮೈಕ್ರೋ ವಿಕ್ಷಕರು ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಇದ್ದಾರೆ ಮತದಾನ ಪೂರ್ತಿ ಪ್ರಕ್ರಿಯನ್ನು ವಿಡಿಯೋ ಚಿತ್ರಿಕರಣದ ಮೂಲಕ ನಡೆಯಲ್ಲಿದೆ ಗೌಪ್ಯ ಮತದಾನಕ್ಕೆ ಹೊತ್ತು ನೀಡಲಾಗುವುದು ಎಂದರು.
ಒಮ್ಮೆ ಮನೆಗೆ ಭೇಟಿ ನೀಡಿದಾಗ ಮನೆಯಿಂದಾಲೇ ಮತದಾನಕ್ಕೆ ಅವಕಾಶ ಕಲ್ಪಿಸುವ ಮತದಾರರು ಮನೆಯಲ್ಲಿ ಇಲ್ಲದೇ ಇದ್ದಲ್ಲಿ ಮತ್ತೊಂದು ಭಾರಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಎಂದ ಅವರು ಸಾಮಾನ್ಯವಾಗಿ ಮತದಾನಕ್ಕೆ ಅವಕಾಶ ಕಲ್ಪಿಸುವ ಸಮಯವನ್ನು ಬಿ.ಎಲ್.ಓ ಗಳು ಮುಂಚಿತವಾಗಿ ತಿಳಿಸಲಿದ್ದಾರೆ ಎಂದರು .
ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ತಂಡವು ಮತದಾನ ಮಾಡಲು ಅಗತ್ಯವಿರುವ ಸಾಮಾಗ್ರಿಗಳಾದ ಮತದಾರರ ಪಟ್ಟಿ, ಮತದಾನವನ್ನು ಗುರುತು ಮಾಡಲು ಪೆನ್ನು, ಇಂಕ್ ಪ್ಯಾಂಡ್ ವಿವಿಧ ನಮೂನೆಯ ಲಕೋಟೆಗಳು, ರಿಜಿಸ್ಟರ್ ಮತದಾನ ಕಂಪಾರ್ಟಮೆಂಟ್ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳೊಂದಿಗೆ ತೆರಳುತ್ತಾರೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ಕೊಪ್ಪ ತಾಲೂಕಿನ ತಹಸಿಲ್ದಾರ್ ಪ್ರತಿಭಾ, ಆರ್ ಹಾಗೂ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…

5 days ago

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…

5 days ago

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…

5 days ago

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…

5 days ago

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…

5 days ago

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…

5 days ago