ಬಜಪೆ : ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ನಾಳೆ ನಡೆಯಲಿರುವ ಹಗಲು ರಥೋತ್ಸವದ ಸಂದರ್ಭ ಬೆಂಗಳೂರಿನ ಕ್ಯಾಪ್ಸ್ ಫೌಂಡೇಷನ್ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಗಜಾಗೃತಿ ಮಾಡಲಿದೆ. ಈ ನಿಟ್ಟಿನಲ್ಲಿ ಬರುವ 10 ಸಾವಿರ ಭಕ್ತರಿಗೆ ಬಟ್ಟೆ ಚೀಲಗಳನ್ನು ವಿತರಿಸಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಅಧ್ಯಕ್ಷ ಸಿಎ ಚಂದ್ರಶೇಖರ ಶೆಟ್ಟಿ ಹೇಳಿದರು.
ಬುಧವಾರ ದೇಗುಲದ ಆಡಳಿತ ಮಂಡಳಿ ಹಾಗೂ ಸಿಬಂದಿಗಳ ಸಮ್ಮುಖ ಚೀಲ ಹಾಗೂ ಟೀಶರ್ಟ್ ಅನಾವರಣಗೊಳಿಸಲಾಯಿತು
ಇದೇ ಸಂದರ್ಭ 700 ಮಂದಿ ಕಟೀಲು ದೇಗುಲದ ಸಿಬಂದಿಗಳು ಹಾಗೂ ಸ್ವಯಂಸೇವಕರಿಗೆ ಟೀಶರ್ಟ್ ನೀಡಲಾಗುವುದು ಎಂದು ತಿಳಿಸಿದ ಚಂದ್ರಶೇಖರ ಶೆಟ್ಟಿ ಈಗಾಗಲೇ ಮುಂಡ್ಕೂರು ಕಜೆ, ಕೊಡೆತ್ತೂರು ತಾಳಿಪಾಡಿ ಮುಂತಾದ ಬ್ರಹ್ಮಕಲಶೋತ್ಸವ ಸಂದರ್ಭ ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಶಿಬರೂರು ಬ್ರಹ್ಮಕಲಶೋತ್ಸವದಲ್ಲಿ 50 ಸಾವಿರ ಬಟ್ಟೆ ಚೀಲ ನೀಡಲಾಗುತ್ತಿದೆ. ಮೂಲ್ಕಿ ತಾಲೂಕು, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಅಲ್ಲದೆ ಒಂದು ಸಾವಿರಕ್ಕೂ ಮಿಕ್ಕಿದ ಶಾಲೆಗಳ ಸಾವಿರಾರು ಮಕ್ಕಳಿಗೆ ಬಟ್ಟೆ ಚೀಲ ನೀಡಲಾಗಿದ್ದು ಪ್ಲಾಸ್ಟಿಕ್ ಬಳಸಬೇಡಿ. ಅಂಗಡಿ ಮುಂತಾದ ಕಡೆಗಳಿಗೆ ಹೋದಾಗ ಬಟ್ಟೆ ಚೀಲಗಳನ್ನೇ ಬಳಸಿ ಎನ್ನುವ ಜಾಗೃತಿಗಾಗಿ ಬಟ್ಟೆ ಚೀಲಗಳನ್ನು ನೀಡಲಾಗುತ್ತಿದೆ. ಅಲ್ಲದೆ ನೀರು ಪಾನೀಯ ಕುಡಿಯಲು ಪ್ಲಾಸ್ಟಿಕ್ ಲೋಟೆ ಬಳಸಬೇಡಿ ಎಂದು ಜಾಗೃತಿ ಮೂಡಸಲಾಗುತ್ತಿದೆ. ಸಹಸ್ರಾರು ಮಕ್ಕಳಿಗೆ ಸ್ಟೀಲಿನ ಬಾಟಲಿ ವಿತರಿಸಲಾಗಿದೆ. ಜಾತ್ರೆಗಳಲ್ಲಿ ಸ್ಟೀಲಿನ ಬಾಟಲಿಯಲ್ಲಿ ನೀರು ವಿತರಿಸಿ ಪ್ಲಾಸ್ಟಿಕ್ ಬಳಸದಂತೆ ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಮೂಲತಃ ಮುಂಡ್ಕೂರಿನವರಾದ ಚಂದ್ರಶೇಖರ ಶೆಟ್ಟಿ ಬೆಂಗಳೂರಿನಲ್ಲಿ ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆ ನಡೆಸುತ್ತಿದ್ದಾರೆ. ಕಟೀಲು ಕೋಟ ರಾಮಕುಂಜ ಶಾಲೆಗಳಲ್ಲಿ ಸಯನ್ಸ್ ಪಾರ್ಕ್ ಗಳನ್ನು ನಿರ್ಮಿಸಿ ಆಧುನಿಕ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…