ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಕೈಕಂಬ ಕ್ರಾಸ್ ನಿಂದ ಬಿ.ಸಿ. ರೋಡ್ ವರೆಗೆ ಬೃಹತ್ ರೋಡ್ ಶೋ ಗುರುವಾರ ಸಂಜೆ ನಡೆಯಿತು.
ತೆರೆದ ವಾಹನದಲ್ಲಿ ಅಭ್ಯರ್ಥಿ ಸಾಗುತ್ತಿದ್ದರೆ, ಕಾರ್ಯಕರ್ತರು, ಮುಖಂಡರು ಜೊತೆಗೂಡಿದ್ದರು. ರೋಡ್ ಶೋ ಬಿ.ಸಿ. ರೋಡ್ ತಲುಪಿದ ಬಳಿಕ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಕಳೆದ ಮೂವತ್ತಮೂರು ವರ್ಷಗಳಲ್ಲಿ ಬಿಜೆಪಿ ಸಾಧನೆ ಏನು ಎಂದರೆ ಕೋಮು ಸಂಘರ್ಷಕ್ಕೆ ಎಡೆ ನೀಡಿದ್ದು, ಹಿಂದುಳಿದ ವರ್ಗದ ಯುವಕರು ಆಸ್ಪತ್ರೆ ಸೇರಿದ್ದು, ಕೊಲೆಗೀಡಾದದ್ದು, ಹಲವು ಮನೆಗಳನ್ನು ಅನಾಥವಾಗಿಸಿದ್ದು. ಇದು ಬಿಟ್ಟರೆ, ಯಾವುದೇ ಯೋಜನೆಗಳು ಬಿಜೆಪಿ ಕಾಲದಲ್ಲಿ ಬಂದಿಲ್ಲ, ಕಾಂಗ್ರೆಸ್ ಸಂಸದರಿದ್ದಾಗ ಜಿಲ್ಲೆಗೆ ಹಲವು ಯೋಜನೆಗಳು ಜಿಲ್ಲೆಗೆ ಬಂದಿದೆ ಎಂದರು.
ನನ್ನ ಹಿಂದೂ ಧರ್ಮ ನನಗೆ ಕಲಿಸಿಕೊಟ್ಟ ಜ್ಞಾನದಿಂದ ಬಡವರ ಕಣ್ಣೀರೊರೆಸುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೇ ನಿಜವಾದ ಹಿಂದೂ ಧರ್ಮ ಎಂದು ನಾನು ನಂಬಿಕೊಂಡು ಬಂದಿದ್ದೇನೆ. ಇದೀಗ ನೈಜ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.
ಮಹಾನಗರಿಗಳಂತೆ ನಮ್ಮ ಮಂಗಳೂರು ದಿನದ ಇಪ್ಪತ್ತು ಗಂಟೆ ಲವಲವಿಕೆಯಿಂದ ಕೂಡಿರಬೇಕಿತ್ತು. ಆದರೆ ಕೋಮು ಹಣೆಪಟ್ಟಿ ಬಿದ್ದ ಕಾರಣ ಸಂಜೆ ಏಳು ಗಂಟೆಗೆ ಮಂಗಳೂರು ಸ್ತಬ್ದವಾಗಿ ಬಿಡುತ್ತದೆ. ಹೀಗಾಗಲು ಅವಕಾಶ ನೀಡಬಾರದು. ಕೋಮು ಸಂಘರ್ಷದ ಹಣೆಪಟ್ಟಿ ಕಳಚಿ, ಉದ್ಯೋಗ ಸೃಷ್ಟಿ ಜಿಲ್ಲೆಯಲ್ಲಿ ಆಗಬೇಕಿದೆ. ನಮ್ಮ ಊರಿನ ಯುವಕರು ನಮ್ಮೂರಲ್ಲೇ ದುಡಿಯಬೇಕು. ತಮ್ಮ ಪೋಷಕರ ಜೊತೆಯೇ ಇರಬೇಕು. ಇದಕ್ಕಾಗಿ ಕಾಂಗ್ರೆಸ್ ಗೆಲ್ಲಬೇಕು. ಈಗಾಗಲೇ ಗೆಲ್ಲುವ ಸೂಚನೆ ನಮಗೆ ಸ್ಪಷ್ಟವಾಗಿದೆ. ಹಾಗೆಂದು ಮೈಮರೆಯುವಂತಿಲ್ಲ. ಈಗಾಗಲೇ ಅಪಪ್ರಚಾರದ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದೇ, ಧೈರ್ಯ ಕಳೆದುಕೊಳ್ಳದೇ ಗೆಲುವಿಗಾಗಿ ಶ್ರಮಿಸಿ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ದೇಶದ ಪ್ರಜಾಪ್ರಭುತ್ವ ಉಳಿಸಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಮಾತನಾಡಿ, ಇಂದು ಕಾಂಗ್ರೆಸಿನ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಗೆಲ್ಲುವ ಅನಿವಾರ್ಯತೆ ಇದೆ. ನೊಂದವರ ಧ್ವನಿಯಾಗಿ, ಬೇಡಿಕೆಗಳನ್ನು ಸರಕಾರಕ್ಕೆ ಸಮರ್ಥವಾಗಿ ತಲುಪಿಸಲು, ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಲು ಪದ್ಮರಾಜ್ ಅರ್ಹ ವ್ಯಕ್ತಿ. ಮುಂದಿನ ಭಾರತ ಸಮರ್ಥ, ಬಲಿಷ್ಠ ಭಾರತವಾಗಬೇಕು. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕೆಪಿಸಿಸಿ ಸದಸ್ಯ ಅಶ್ವನಿ ಕುಮಾರ್ ರೈ, ಪದ್ಮಶೇಖರ್ ಜೈನ್, ಕೆ.ಸಂಜೀವ ಪೂಜಾರಿ, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಸುರೇಶ್ ಕುಮಾರ್ ನಾವೂರು, ಜಗದೀಶ್ ಕೊಯಿಲ, ಇಬ್ರಾಹಿಂ ನವಾಝ್, ಜಯಂತಿ ವಿ. ಪೂಜಾರಿ, ಜೋಸ್ಫಿನ್ ಡಿಸೋಜಾ, ಬೇಬಿ ಕುಂದರ್, ಅನ್ವರ್ ಕರೋಪಾಡಿ, ಮೋಹನ್ ಗೌಡ ಕಲ್ಮಂಜ, ಪದ್ಮನಾಭ ರೈ, ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಡಿ ಸ್ವಾಗತಿಸಿದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…