ಮಂಗಳೂರು: ಪ್ರಜಾಪ್ರಭುತ್ವದ ಮಹಾಹಬ್ಬದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ. ಖದರ್ ಅವರು ಭಾಗಿಯಾಗಿದ್ದಾರೆ.

ಕುಟುಂಬ ಸಹಿತವಾಗಿ ಬಂದು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬೂತ್ ನಂಬರ್ 103 ರಲ್ಲಿ ಯು.ಟಿ ಖಾದರ್ ಮತದಾನ ಮಾಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೋಳಿಯಾರು ಸರ್ಕಾರಿ ಶಾಲೆಯಲ್ಲಿನ ಬೂತ್ ನಂಬರ್ 103 ರಲ್ಲಿ ಪತ್ನಿ, ಮಗಳ ಜೊತೆ ಬಂದು ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದರು.






