ಮುಲ್ಕಿ : ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಗ್ರಾಮ ಪಂಚಾಯತ್ ಪಡುಪಣಂಬೂರು,ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ,ದ. ಕ, ಜಿಲ್ಲೆ, ಇದರ ಸಹಕಾರದಲ್ಲಿ,ಜಿಲ್ಲಾ , ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ,ಇದರ ಆಶ್ರಯದಲ್ಲಿ ತೋಕೂರು ಗ್ರಾಮದ 2ನೇ ವಾರ್ಡಿನ ದೇನೊಟ್ಟು ರಾಘವ ಹೆಬ್ಬಾರರ ಮನೆಯ ಬಳಿ ಪರಂಬೋರು ತೋಡಿನ ಕಿಂಡಿ ಅಣೆಕಟ್ಟುವಿನಲ್ಲಿ ಕೃಷಿಕರ ಅನುಕೂಲಕ್ಕಾಗಿ ನೀರು ಉಳಿಸುವ ಉದ್ದೇಶದಿಂದ ಕಳೆದ ವರ್ಷ ಡಿ. ತಿಂಗಳಿನಲ್ಲಿ ಕಿಂಡಿ ಅಣೆಕಟ್ಟುವಿಗೆ ಅಡ್ಡ ಹಲಗೆಗಳನ್ನು ಇಟ್ಟು ಮಣ್ಣು, ಬೈಹುಲ್ಲು ತುಂಬಿಸಿ ನೀರನ್ನು ತಡೆ ಹಿಡಿಯಲಾಗಿತ್ತು.

▪️ದಿನಾಂಕ 28-4-2024 ರವಿವಾರ ,ಬೆಳಿಗ್ಗೆ ಘಂಟೆ 7:30ರಿಂದ ಕಿಂಡಿ ಅಣೆಕಟ್ಟಿಗೆ ಹಾಕಿದ್ದ ಹಲಗೆಗಳನ್ನು ತೆಗೆದು ಮತ್ತು ರಾಜ ಕಾಲುವೆಯಲ್ಲಿ ಸಂಗ್ರಹವಾದ ಮರದ ಕೊಂಬೆಗಳನ್ನು,ತ್ಯಾಜ್ಜ ವಸ್ತುಗಳನ್ನು ಹೊರ ತೆಗೆದು ಸ್ವಚ್ಛ ಗೊಳಿಸುವುದರ ಮೂಲಕ ಮಳೆಗಾಲದ ನೀರು ಸರಾಗವಾಗಿ ಹರಿಯಲು ಅನುವು ಮಾಡಿ ಕೊಡಲಾಯಿತು.
▪️ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಇದರ ಸದಸ್ಯರಾದ ಶ್ರೀ ಮೋಹನದಾಸ್, ಸಂತೋಷ್ ಕುಮಾರ್ ಸಂಸ್ಥೆಯ ಅಧ್ಯಕ್ಷ ಶ್ರೀ ಜಗದೀಶ್ ಕುಲಾಲ್,ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ , ನಿಕಟ ಪೂರ್ವ ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಜಗದೀಶ್ ಕೋಟ್ಯಾನ್,ಸದಸ್ಯರಾದ ಶ್ರೀ ದರ್ಮಾನಂದ ಶೆಟ್ಟಿಗಾರ್,ಶ್ರೀ ಚಂದ್ರಶೇಖರ್ ದೇವಾಡಿಗ,ಗ್ರಾಮಸ್ಥರಾದ ಶ್ರೀ ರಾಘವ.ಜಿ.ಹೆಬ್ಬಾರ್,ಶ್ರೀ ರಮೇಶ್ ಕುಲಾಲ್,ಮತ್ತಿತರರು ಉಪಸ್ಥಿತರಿದ್ದರು.



