ಪುತ್ತೂರು: ನೆಹರೂನಗರದಿಂದ ವಿವೇಕಾನಂದ ಕಾಲೇಜು ಕ್ಯಾಂಪಸ್ ಮೂಲಕ ಹಾರಾಡಿಗೆ ಸಂಪರ್ಕಿಸುವ ರಸ್ತೆಯ ರೈಲ್ವೇ ಮೇಲ್ಸೇತುವೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ರೂ. ೫.೩೫ ಕೋಟಿ ವೆಚ್ಚದಲ್ಲಿ ನಡೆದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಸಂಜೆ ಅಧಿಕೃತವಾಗಿ ಸಂಚಾರಕ್ಕೆ ಚಾಲನೆ ನೀಡಿದರು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ನಳಿನ್ ಕುಮಾರ್ ಮಾಧ್ಯಮಗಳ ಜತೆ ಮಾತನಾಡಿ, ಮೇಲ್ಸೇತುವೆ ಅಗಲಗೊಳಿಸಬೇಕೆಂಬುದು ಬಹು ಸಮಯಗಳ ಬೇಡಿಕೆಯಾಗಿತ್ತು. ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಸೇತುವೆಯನ್ನು ಅಭಿವೃದ್ಧಿಪಡಿಸಬೇಕೆಂದು ವಿವೇಕಾನಂದ ವಿದ್ಯಾಸಂಸ್ಥೆಯಿAದಲೂ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪುತ್ತೂರು, ಉಪ್ಪಿನಂಗಡಿಗೆ ಬೈಪಾಸ್, ವರ್ತುಲ ರಸ್ತೆಯಾಗಿಯೂ ಬಳಕೆಯಾಗುವ ಉದ್ದೇಶದಿಂದ ಇದು ಆದ್ಯತೆಯ ಅಭಿವೃದ್ಧಿ ವಿಚಾರವಾಗಿತ್ತು. ಬಳಿಕದಲ್ಲಿ ರೈಲ್ವೇ ನಿಯಮಾವಳಿ ೫೦:೫೦ರ ಅನುಪಾತದ ಅನುದಾನ ನೀಡುವ ಕುರಿತ ಚರ್ಚೆಯೂ ಇತ್ತು. ಆದರೆ ಕೊನೆಗೆ ಸಂಪೂರ್ಣ ಅನುದಾನವನ್ನೂ ಕೇಂದ್ರ ರೈಲ್ವೇ ಇಲಾಖೆಯೇ ನೀಡಿದೆ. ಸ್ಥಳೀಯಾಡಳಿತದ ವ್ಯಾಪ್ತಿಯಲ್ಲಿದ್ದರೂ ಸಂಪೂರ್ಣ ಅನುದಾನವನ್ನು ರೈಲ್ವೇ ಇಲಾಖೆಯೇ ನೀಡುವುದು ದೇಶದಲ್ಲೇ ಪ್ರಥಮ ಎಂದು ನಳಿನ್ ಹೇಳಿದರು.
ಹಲವು ರೀತಿಯ ಅಡೆತಡೆಗಳಿದ್ದರೂ ೫ ತಿಂಗಳ ಸೀಮಿತ ಅವಧಿಯಲ್ಲಿ ಮೇಲ್ಸೇತುವೆ, ರಸ್ತೆಯೂ ಅಭಿವೃದ್ಧಿಗೊಂಡಿದ್ದು, ಸಂಚಾರಕ್ಕೆ ಮುಕ್ತಗೊಂಡಿದೆ. ಸೀಮಿತ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ನಳಿನ್, ರೈಲ್ವೇಗೆ ಸಂಬAಧಿಸಿದ ಪುತ್ತೂರಿನ ಎಲ್ಲಾ ಬೇಡಿಕೆಗಳು ಈಡೇರಿವೆ. ಎಪಿಎಂಸಿ ರೈಲ್ವೇ ಅಂಡರ್ ಪಾಸ್, ಹಾರಾಡಿ ರೈಲ್ವೇ ಸಂಪರ್ಕ ರಸ್ತೆ, ವಿವೇಕಾನಂದ ಮೇಲ್ಸೇತುವೆಯ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ವಿವೇಕಾನಂದ ವಿದ್ಯಾಸಂಸ್ಥೆಗಳಿಗೆ ಸಂಬAಧಪಟ್ಟ ಪ್ರಮುಖರಾದ ಅಚ್ಯುತ್ ನಾಯಕ್, ಇ. ಶಿವಪ್ರಸಾದ್, ಸಂತೋಷ್ ಬೊನಂತಾಯ, ರವಿ ನಾರಾಯಣ, ಶ್ರೀಪತಿ ಕಲ್ಲುರಾಯ, ರೂಪಲೇಖಾ, ವಿಷ್ಣು ಗಣಪತಿ ಭಟ್, ಮುರಳಿಕೃಷ್ಣ ಚಳ್ಳಂಗಾರು, ಪ್ರಮುಖರಾದ ಅಜಿತ್ ರೈ ಹೊಸಮನೆ, ಡಾ. ಸುಧಾ ರಾವ್, ಭಾಮಿ ಅಶೋಕ್ ಶೆಣೈ,ವಿಶ್ವನಾಥ ಗೌಡ, ಶಿವಕುಮಾರ್, ವಿನಯ ಕಲ್ಲೇಗ, ದಿನೇಶ್ ಜೈನ್, ಮುರಳಿಕೃಷ್ಣ ಹಸಂತಡ್ಕ, ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು, ರಾಜೇಶ್ ಬನ್ನೂರು ಸೇರಿದಂತೆ ಸ್ಥಳೀಯರು, ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…