ಬಂಟ್ವಾಳ: ಮಾರ್ನಬೈಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ಕಸವನ್ನು ಎಸೆಯುವುತ್ತಿದ್ದು, ಇದೀಗ ರಸ್ತೆಯ ಉದ್ದಕ್ಕೂ ಕಸದ ರಾಶಿಯಾಗಿದ್ದು, ಪರಿಸರ ತುಂಬಾ ದುರ್ವಾಸನೆ ಬೀರುತ್ತಿದ್ದು,ರೋಗದ ಬೀತಿಯಲ್ಲಿ ಜನ ಆತಂಕದಲ್ಲಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ತಾಲೂಕಿನಲ್ಲಿ ಜ್ವರದ ಪ್ರಕರಣಗಳು ಕಂಡು ಬರುತ್ತಿದ್ದು, ತ್ಯಾಜ್ಯದಿಂದ ಉಂಟಾಗುವ ಸೊಳ್ಳೆಗಳು ಕಾರಣವಾಗಿರಬಹುದೇ ಎಂಬ ಆತಂಕ ಸ್ಥಳೀಯರದ್ದು.
ಕಸವನ್ನು ಎಸೆಯದಂತೆ ಇಲ್ಲಿನ ಸ್ಥಳೀಯ ಗ್ರಾ.ಪಂ.ಕೈಗೊಂಡಿರುವ ಕ್ರಮಗಳು ಸದ್ಯ ಕಸ ಎಸಯು ಜನರಿಗೆ ಅನ್ವಯವಾಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಮಾಣಿ ಮೈಸೂರು ಕೋಣಾಜೆ ರಸ್ತೆಯ ಮಧ್ಯೆ ಮೆಲ್ಕಾರ್ ನಿಂದ ಸುಮಾರು 2 ಕಿ.ಮೀ ಮುಂದೆ ಚಲಿಸಿದರೆ ಸಿಗುವ ಮಾರ್ನಬೈಲು ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಸುಮಾರು ಒಂದು ಕಿ.ಮೀ ವರೆಗೆ ಬಿಸಾಡಿರುವ ಕಸದ ರಾಶಿಯ ದೃಶ್ಯ ಇಲ್ಲಿದೆ.
ಇಲ್ಲಿ ಕಸವನ್ನು ಎಸೆಯಬಾರದು, ಕಸ ಎಸೆಯುವುದು ಅಪರಾಧವಾಗಿದ್ದು ಕಸ ಎಸೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾಮಫಲಕ ಅಳವಡಿಸಿದ್ದಾರೆ. ಆದರೆ ನಾಮಫಲಕ ಕೇವಲ ಶಾಶ್ವತ ಫಲಕವಾಗಿ ಉಳಿದಿದೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ.
ಮಾರ್ನಬೈಲು ಮಾರಣಗುಳಿಗನ ಕಟ್ಟೆಯಿದ್ದು ಅದರ ಎದುರುಭಾಗದ ತುಂಬಾ ಕಸ ತುಂಬಿಹೋಗಿದೆ.
ಕಸ ಎಸೆಯುವ ಪರಿಸರದಲ್ಲಿ ನೂರಾರು ಮನೆಗಳಿವೆ. ಪ್ರಸ್ತುತ ಕಸ ಕಾಣುವ ರಸ್ತೆಯ ಮುಂಭಾಗದಲ್ಲಿ ಮನೆ, ವಾಣಿಜ್ಯ ಮಳಿಗೆಗಳಿಯ ಜೊತೆ ಇಲ್ಲೇ ಪಕ್ಕದಲ್ಲಿ ಟ್ರಾಫಿಕ್ ಠಾಣೆ ಕೂಡ ಇದೆಯಾದರೂ ಕಸ ಎಸೆಯುವವ ದುರ್ಬಲ ಮನಸ್ಸಿನ ಜನರಿಗೆ ಅದ್ಯಾವುದು ಕ್ಯಾರೇ ಇಲ್ಲ. ಕನಿಷ್ಠ ಜ್ಞಾನವೂ ಇಲ್ಲ ಎಂಬುದೇ ಬೇಸರದ ವಿಚಾರ.
ಸ್ಥಳೀಯರು ನೀಡುವ ಮಾಹಿತಿ ಪ್ರಕಾರ ಹೊರಗಿನಿಂದ ಬರುವ ವ್ಯಕ್ತಿಗಳು ವಾಹನಗಳಲ್ಲಿ ಬಂದು ಕಸವನ್ನು ಎಸೆದು ಹೋಗುತ್ತಾರೆ. ಇದರಿಂದ ಇಲ್ಲಿನ ಜನರು ಅನೇಕ ರೋಗಗಳಿಗೆ ತುತ್ತಾಗುವ ಭೀತಿ ಎದುರಾಗಿದೆ.
ಇನ್ನೂ ಮಳೆ ಬಂದರೆ ತ್ಯಾಜ್ಯ ಕೊಳೆತು ಅದರ ನೀರು ಮನೆಯ ಬಾಚಿಗಳಿಗೆ ಇಂಗುವ ಆತಂಕ ಎದುರಾಗಿದೆ. ಈಗಾಗಲೇ ನಾಯಿ ಹಾಗೂ ಇತರ ಪ್ರಾಣಿಗಳು ತಿನ್ನುವುದಲ್ಲದೆ,ರಸ್ತೆಗೆ ಎಳೆದು ಹಾಕಿ ಈ ಪರಿಸರ ತುಂಬಾ ಗಲೀಜುಮಾಡುತ್ತಿದೆ. ಈಗಾಗಲೇ ಕೊಳೆತ ತ್ಯಾಜ್ಯದ ರಾಶಿಯಲ್ಲಿ ಸೊಳ್ಳೆಗಳು ಉತ್ಪಾದನೆಯಾಗಿದೆ, ಈ ಪರಿಸದರಲ್ಲಿ ಸೊಳ್ಳೆಗಳ ಕಾಟದಿಂದ ಜೀವನವೇ ಕಷ್ಟವಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ತ್ಯಾಜ್ಯ ದ ರಾಶಿ ಕೊಳೆತು ವಾಸನೆ ಬೀರುತ್ತಿರುವುದರಿಂದ ರಸ್ತೆಯಲ್ಲಿ ಸಂಚಾರ ಮಾಡುವವರು ಮೂಗಿಗೆ ಕೈ ಹಿಡಿದು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯ ಇಲಾಖೆ ಯಾಕೆ ಮೌನ?
ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವ ಆರೋಗ್ಯ ಇಲಾಖೆ ಕಸ ಎಸೆಯುವವರ ವಿರುದ್ದ ಕಾನೂನುಬದ್ಧ ಕ್ರಮವನ್ನು ಯಾಕೆ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.
ಆಶಾ ಕಾರ್ಯಕರ್ತರು ಇರಬಹುದು ಅಥವಾ ಇಲಾಖೆಗೆ ಸಂಬಂಧಿಸಿದ ಇತರ ಸಿಬ್ಬಂದಿಗಳು ಇರಬಹುದು ಇಲ್ಲಿನ ಅವಸ್ಥೆಯನ್ನು ಕಂಡಿಲ್ಲವೇ? ಇದೇ ಮಾರ್ಗವಾಗಿ ಅನೇಕ ಸರಕಾರಿ ಅಧಿಕಾರಿಗಳು ಸಂಚಾರ ಮಾಡುದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ: ಲೋಹಿತ್
ಮನೆ ನಿರ್ಮಾಣ ಮಾಡುವ ವೇಳೆ ಗ್ರಾಮಪಂಚಾಯತ್ ಗಟ್ಟಿ ನಿರ್ಧಾರವೊಂದನ್ನು ಮಾಡಬೇಕಿದ್ದು, ಅಮೂಲಕ ಕಸ ಎಸೆಯುವ ವ್ಯಕ್ತಿಗಳಿಗೆ ಬುದ್ದಿ ಕಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮನೆ ನಿರ್ಮಾಣದ ಉದ್ದೇಶದಿಂದ ಪರವಾನಿಗೆಗೆಂದು ಗ್ರಾಮಪಂಚಾಯತ್ ಗೆ ಬರುವವರು ಕಡ್ಡಾಯವಾಗಿ ಮನೆಯ ಕಾಂಪೌಂಡ್ ನೊಳಗೆ ಕಸವನ್ನು ಹಾಕಲು ಗುಂಡಿ ನಿರ್ಮಾಣ ಮಾಡಬೇಕು ಮತ್ತು ಅದರಲ್ಲಿ ಕಸವನ್ನು ಹಾಕಬೇಕು ಎಂಬ ನಿಯಮಮಾಡೇಕು,ಅಂತಹವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಬೇಕು. ಮತ್ತು ಪ್ರತಿ ತಿಂಗಳಿಗೊಮ್ಮೆ ಗುಂಡಿಗೆ ಕಸ ಹಾಕುತ್ತಾರಾ? ಎಂದು ಪರಿಶೀಲನೆ ಮಾಡುವ ಜವಬ್ದಾರಿಯನ್ನು ಗ್ರಾ.ಪಂ.ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ತ್ಯಾಜ್ಯದ ವಿರುದ್ದ ಹೋರಾಟ ಮಾಡದಿದ್ದರೆ ಇಡೀ ಪರಿಸರವನ್ನು ಕೆಲವು ದುರುದ್ದೇಶ ಹೊಂದಿರುವ ವ್ಯಕ್ತಿಗಳು ಹಾಳು ಮಾಡುತ್ತಾರೆ ಎಂದು ಅವರು ಆರೋಪ ಮಾಡಿದ್ದಾರೆ.



