ಟೈಟಲ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಯನ್ ಶೆಟ್ಟಿ ನಿರ್ದೇಶನದ ‘ಅಧಿಪತ್ರ’ ಚಿತ್ರದ ಟೀಸರ್ ಇದೇ ಮೇ ೧೦ಕ್ಕೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತಂತೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದು ಜಾನವಿ ಇವರಿಗೆ ಜೋಡಿಯಾಗಿದ್ದಾರೆ. ರಘು ಪಾಂಡೇಶ್ವರ್, ಎಂ ಕೆ ಮಠ, ಪ್ರಕಾಶ್ ತೂಮಿನಾಡ್ , ಅನಿಲ್ ಉಪ್ಪಲ್, ದೀಪಕ್ ರೈ, ಪ್ರಶಾಂತ್ ಮತ್ತು ಕಾರ್ತಿಕ್ ಭಟ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಕೆ ಆರ್ ಸಿನಿ ಕಂಬೈನ್ಸ್ ಲಾಂಛನದಲ್ಲಿ ಕುಲದೀಪ್ ರಾಘವ್, ದಿವ್ಯ ನಾರಾಯಣ್ ಮತ್ತು ಲಕ್ಷ್ಮಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಹುಲ್ ವಸಿಷ್ಠ ಸಂಕಲನ ಮತ್ತು ಶ್ರೀಕಾಂತ್ ಛಾಯಾಗ್ರಹಣವಿದೆ.


Get ready to be captivated! #Adhipatra's teaser premieres May 10th, 12:55 PM#roopeshshetty #jhanvi #chayanshetty #prakashkthuminadu #krcinecombines #adhipatra #kuldeepraaghav #raghupandeshwar #deepakraipanaje #karthikshetty6 #janu8213 #laharimusic pic.twitter.com/zwjFubItTe
— Lahari Music (@LahariMusic) May 5, 2024



