ಜನ ಮನದ ನಾಡಿ ಮಿಡಿತ

Advertisement

ಮಲ್ಪೆ ಬೀಚ್‌ನ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ..!!

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್ ಬಾಟಲ್ ಹಾಗೂ ತ್ಯಾಜ್ಯ ರಾಶಿಯಿಂದ ಬೀಚ್ ನ ಅಂದ ಕೆಟ್ಟುಹೋಗಿದೆ.


ಮಲ್ಪೆಯ ಬೀಚ್ ಗೆ ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಸಾವಿರಾರು ಜನರು ಬೀಚ್ ವಿಸಿಟ್ ಮಾಡುತ್ತಿದ್ದಾರೆ. ಆದ್ರೆ ಬೀಚ್ ನ ಬಲ ಭಾಗದ ಪ್ರದೇಶ ಕಸದಿಂದ ಕೂಡಿದ್ದು ನಿರ್ವಹಣೆ ಇಲ್ಲದೇ ಬೀಚ್ ಸೊರಗಿದೆ. ಒಂದು ಕಡೆ ವಾಟರ್ ಗೇಮ್ , ಪ್ಲೋಟಿಂಗ್ ಬ್ರಿಡ್ಜ್ ನ ಅಂದ ಕಂಡರೆ ಇನ್ನೊಂದು ಭಾಗದಲ್ಲಿ ಬಿಯರ್ ಬಾಟಲಿ, ಪ್ಲಾಸ್ಟಿಕ್ ಬಾಟಲಿ, ಬಲೆಗಳು ಹಾಗೂ ಕಸದಿಂದ ತುಂಬಿದ್ದು ಬೀಚ್ ನಲ್ಲಿ ಕಾಲಿಡಲು ಅಸಹ್ಯವಾಗುತ್ತಿದೆ. ಸಂಜೆಯಾಗುತ್ತಲೇ ಈ ಭಾಗದಲ್ಲಿ ಯುವಕರ ತಂಡ ಪಾರ್ಟಿ ನಡೆಸುತ್ತಿದ್ದು, ಬಿಯರ್ ಬಾಟಲಿಗಳನ್ನು ಬೀಚ್ ಬದಿ ಬಿಸಾಡಿ ಹೋಗುತ್ತಿದ್ದಾರೆ.ಇದರಿಂದ ಇಂತಹ ಬಾಟಲಿಗಳು ಸಮುದ್ರಕ್ಕೆ ಸೇರುತ್ತಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಬೀಚ್ ಅಭಿವೃದ್ದಿ ಸಮಿತಿ ಈ ಬಗ್ಗೆ ಕಾಳಜಿ ವಹಿಸಿ ಬೀಚ್ ಸ್ವಚ್ಚತೆಯತ್ತ ಗಮನ ಸೆಳೆಯಬೇಕಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!