ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ (7ಮೇ2024) ನಿಧನರಾಗಿದ್ದಾರೆ.

ಅವರಿಗೆ ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಮಗ ಹರ್ಷವರ್ಧನ ಪಿ.ಆರ್ ಹಾಗೂ ಅಳಿಯ ಕೃಷ್ಣ ಎಂ.ವಿ, ಜಯಪಾಲ್ ಎಚ್.ಆರ್. ಸೊಸೆ ಸುಧಾ ಟಿ.ಜೆ ಹಾಗೂ ಮೊಮ್ಮಕ್ಕಳು ಸುಹೃತ್, ಸಹಜ, ನಿಸ್ವನ, ಅವಲೋಕಿತ, ನಲ್ಮೆ, ಆತ್ಮೀಯ ಇದ್ದಾರೆ.



