ಹುಣಸೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸ್ಥಾಪನ ದಿನದ ಆಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

ಹುಣಸೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅವರು ಕನ್ನಡ ಭಾಷೆಗೆ ಮಹಾರಾಜರ ಕಾಲದಿಂದಲೂ ಒಳ್ಳೆಯ ಸ್ಥಾನಮಾನ ಇದ್ದು ಎರಡು ಸಾವಿರ ವರ್ಷದ ಇತಿಹಾಸವಿದೆ ಎಂದರು. ಹಾಗಾಗಿ ಕನ್ನಡ ಭಾಷೆಯನ್ನು ಉಳಿಸಿ, ಬೆಳಸೋಣ ಎಂದರು.
ಇದೆ ವೇಳೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹುಣಸೂರು ತಾಲ್ಲೂಕಿನ ತಿಪ್ಪಲಪುರ ಗ್ರಾಮದ ಎಂ ಲೇಖನ್ , ಸ್ಪೀಕ್ ಫಾರ್ ಇಂಡಿಯಾ ರಾಷ್ರ್ಟಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಹೆಚ್ ವಿ ಶ್ಯಾಮ್ ಪ್ರಸಾದ್ , ಸ್ನಾತಕೋತ್ತರ ಪದವಿ ಚಿನ್ನದ ಪದಕ, ನಗದು ಬಹುಮಾನ ವಿಜೇತರಾದ ಅಮೃತ ಎಂ ಎ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು,
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಉಪ ವಿಭಾಗಧಿಕಾರಿ ಮಹಮ್ಮೊದ್ ಹ್ಯಾರಿಸ್ ಸುಮೇರ್ , ಪ್ರಾಂಶುಪಾಲರಾದ ಪುಟ್ಟಶೆಟ್ಟಿ , ಮಂಡಿಕೆರೆ ಗೋಪಾಲ್ , ಹುಣಸೂರು ಕ.ಸಾ.ಪ ಅಧ್ಯಕ್ಷ ಹೆಚ್ ಕೆ ಮಹದೇವ್ , ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ನಿವೃತ ಪ್ರಾಂಶುಪಾಲರಾದ ಮೋದೂರು ಮಹೇಶ್, ಚಂದ್ರಶೇಖರ್ , ಸೋಮಶೇಖರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.



