ಸಂಸ್ಥೆಯ ಆಡಳಿತವನ್ನು ಆಡಳಿತ ವರ್ಗ ನಿರ್ವಹಿಸುತ್ತಿದ್ದರೆ, ಸಿಬ್ಬಂದಿಗಳ ಕಾರ್ಯದಕ್ಷತೆ ಒಂದು ಸಂಸ್ಥೆಯ ಬೆಳವಣಿಗೆಗೆ ಮಹತ್ತರವಾದ ಪಾತ್ರ ವಹಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು ನುಡಿದರು.

ಅವರು ಇಂದು ಪ್ರಿಯದರ್ಶಿನಿ ಕೋ ಆಪರೇಟರ್ ಸೊಸೈಟಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.ಸೊಸೈಟಿಯ ಪರವಾಗಿ ಅಧ್ಯಕ್ಷರಾದ ಶ್ರೀ ಎಚ್ ವಸಂತ್ ಬರ್ನಾಡ್ ರವರು ಶ್ರೀಯುತರನ್ನು ಶಾಲು ಹೊದಿಸಿ ಗೌರವಿಸಿದರು.ಮುಖ್ಯ ಕಾರ್ಯನಿರ್ವಾಣ ಧಿಕಾರಿ ಸುದರ್ಶನ್ ರವರು ವಂದಿಸಿದರು.ಹಳೆಯಂಗಡಿ ಪಂಚಾಯತಿನ ಸದಸ್ಯರಾದ ಅಬ್ದುಲ್ ಅಜೀಜ್, ಸಮಾಜ ಸೇವಕ ಧರ್ಮಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.



