ಹೆದ್ದಾರಿಯ ಒಂದು ಭಾಗವನ್ನು ನೀರಿನ ಪೈಪ್ ಲೈನ್ ಗಾಗಿ ಅಗೆದಿದ್ದು,ಅಗೆದ ರಸ್ತೆಯನ್ನು ತೇಪೆ ಕಾರ್ಯ ಮಾಡದೆ ಕೇವಲ ಕಲ್ಲು ಮತ್ತು ಮಣ್ಣ ನ್ನು ಹಾಕಿ ಮುಚ್ಚಲಾಗಿದೆ.ಈ ಮಣ್ಣು ಕಲ್ಲುಗಳು ಎದ್ದು ಹೋಗಿ ದ್ವಿಚಕ್ರವಾಹನಗಳ ಹಾಗೂ ಇನ್ನಿತರ ವಾಹನಗಳ ಸವಾರರಿಗೆ ಅಪಾಯ ಕಾರಿಯಾಗಿ ಪರಿಣಮಿಸಿದೆ.

ಮುಖ್ಯವಾಗಿ ದ್ವಿಚಕ್ರವಾಹನಗಳ ಸವಾರರು ಹೊಂಡವನ್ನು ತಪ್ಪಿಸಿ ಸಂಚರಿಸುತ್ತಿರುವ ಸಂದರ್ಭ ಎದುರಿನಿಂದ ವಾಹನಗಳು ಬರುವಂತಹ ಸಂದರ್ಭದಲ್ಲಿ ಬಹಳಷ್ಟು ಅಪಾಯಕಾರಿ ಯಾಗಿದೆ.ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



