ಸರಗೂರು- ತಾಲ್ಲೂಕಿನ ಹೆಗ್ಗನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ದೇಶಕಂಡ ಮಹಾನಾಯಕ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇ ಜಯಂತಿಯನ್ನು ಬಹಳ ಅದ್ದೂರಿಯಾಗಿ ನಡೆಸಲಾಯಿತು.

ಮೊದಲು ಡಾ ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ಆರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು, ಗ್ರಾಮದ ಪ್ರಮುಖ ಬೀದಿಯಲ್ಲಿ ಬ್ಯಾಂಡ್ ಸೇಟ್, ವಾದ್ಯಗೋಷ್ಠಿಗಳ ಜೊತೆಯಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ಮಾತನಾಡಿದ ಗ್ರಾಮದ ಮುಖಂಡ ಶಂಭು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ನಮಗೆ ಸಂವಿಧಾನ ಬರೆದು ನೀಡಿರುವುದು ದೇಶಕ್ಕೆ ಒಂದು ಕೀರ್ತಿ ತಂದಿದೆ ಸಂವಿಧಾನದಿಂದ ಜನರಿಗೆ ಉತ್ತಮ ನ್ಯಾಯ, ಸಾಮಾಜಿಕ ನ್ಯಾಯ ನೀಡುವುದು ನಮ್ಮೆಲ್ಲರ ಹೊಣೆ ಜೊತೆಗೆ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಶಿಕ್ಷಣ ಸಿಗಬೇಕೆಂಬ ಕಲ್ಪನೆಯನ್ನು ಹೊಂದಿದ್ದ ಅಂಬೇಡ್ಕರ್ ರವರು ತಮ್ಮ ಜೀವಿತವನ್ನು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವವರಿಗಾಗಿ ಸಮರ್ಪಣೆ ಮಾಡಿದ್ದರು.
ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬೇಕಾದರೆ, ಎಲ್ಲಾ ವರ್ಗದ ಜನತೆಗೆ ಸಮಾನತೆ ದೊರೆಯಬೇಕಾದರೆ, ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಸಜ್ಜಾಗಬೇಕು, ಯುವಜನತೆ ಪುಸ್ತಕಗಳನ್ನು ಓದುವಂತಹ ಅಭ್ಯಾಸಗಳನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಾಜಮಾನರಾದ ನಾಗಯ್ಯ, ಶಂಭುಲಿಂಗಯ್ಯ, ಮಾದಯ್ಯ, ನಾಗರಾಜು, ಮಾರಯ್ಯ, ತ್ರಿಶಂಭು, ವಿಜಯ್, ದೊಡ್ಡಯ್ಯ, ನಾಗಯ್ಯ, ಗೋಪಾಲಯ್ಯ, ಕೃಷ್ಣಯ್ಯ, ಸೋಮಯ್ಯ, ಚಲುವರಾಜು, ಮಣಿ, ಸುಂದರ್, ಗೋಪಾಲಯ್ಯ, ವೆಂಕಟೇಶ್, ಮಹೇಂದ್ರ, ಕಾಳರಾಜು, ಚಿನ್ನಯ್ಯ, ಸುರೇಶ್, ಮಂಜು, ಶಂಕರ್, ಬಾಲಕೃಷ್ಣ ಸೇರಿದಂತೆ ಯುವಕರು ಹಾಜರಿದ್ದರು.



