ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾದಿರಿಸದ ಟಿಕೆಟ್‌ಗಳನ್ನು ಸ್ವಯಂಚಾಲಿತ 43883 ಯಂತ್ರ(ಎಟಿವಿಎಂ) ಅಳವಡಿಸಲಾಗಿದೆ. ಇದರಲ್ಲಿ ಈ ಹಿಂದೆಸಹಾಯಕರನ್ನು ನಿಯೋಜಿಸಿ ಟಿಕೆಟ್‌ಗಳನ್ನು ವಿತರಿಸಲಾಗು ತ್ತಿದ್ದರೂ ಕೋವಿಡ್ ಅವಧಿಯಲ್ಲಿ ಈ ಸೇವೆ ರದ್ದುಗೊಂಡಿತ್ತು.
ಕಷ್ಟವಾಗಿರುವುದರಿಂದ ಬಹುತೇಕ ಮಂದಿ ಕೌಂಟರ್‌ಗಳಿಂದಲೇ ಪಡೆದು ಪ್ರಯಾಣಿಸುತ್ತಿದ್ದಾರೆ. ಇದೀಗ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ಈ ಯಂತ್ರದ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಸಹಾಯಕರನ್ನು ನಿಯೋಜಿಸಿ ಟಿಕೆಟ್ ವಿತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಅದರಂತೆ ಮೊದಲ ಹಂತದಲ್ಲಿ ಎಟಿವಿಎಂ ಇರುವ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಕಾಸರಗೋಡು ಸಹಿತ ವಿಭಾಗ ವ್ಯಾಪ್ತಿಗೆ 300 ಸಹಾಯಕರನ್ನು ನಿಯೋಜಿಸಲು ಮುಂದಾಗಿದೆ.
ಪ್ರತಿದಿನ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 8 ಲಕ್ಷ ರೂ. ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಕಾದಿರಿಸದ ಟಿಕೆಟ್ ವಿತರಣೆ ಆಗುತ್ತಿದೆ. ಇನ್ನು ಮುಂದೆ ಇದನ್ನು ಸಂಪೂರ್ಣವಾಗಿ ಎಟಿವಿಎಂ ಮೂಲಕವೇ ವಿತರಿಸುವುದು ಇಲಾಖೆಯ ಗುರಿ. ಮಂಗಳೂರು ಸೆಂಟ್ರಲ್‌ಗೆ 21 ಮತ್ತು ಜಂಕ್ಷನ್‌ಗೆ 9 ಸಿಬಂದಿ ನಿಯೋಜಿಸಲು ಉದ್ದೇಶಿಸಲಾಗಿದ್ದು, ದಿನದ 24 ಗಂಟೆಯೂ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ.
ಒಂದು ವರ್ಷದ ಒಪ್ಪಂದದ ಆಧಾರದಲ್ಲಿ ಸಹಾಯಕರ ನೇಮಕಾತಿ ನಡೆಯಲಿದ್ದು, ಇವರು ರೈಲ್ವೇ ಇಲಾಖೆಯ ನೌಕರರಲ್ಲ. ಟಿಕೆಟ್ ಮಾರಾಟದ ಮೇಲಿನ ಕಮಿಷನ್ ಆಧಾರದಲ್ಲಿ ಈ ಸಹಾಯಕರ ಆದಾಯ ಪಡೆಯಲಿದ್ದಾರೆ. ಇದಕ್ಕಾಗಿ ರೈಲ್ವೇ ಅರ್ಜಿ ಆಹ್ವಾನಿಸಿದ್ದು, http://www.sr.indianrailways.gov.in ನಲ್ಲಿ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಎಸೆಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 24 ಕೊನೇ ದಿನಾಂಕ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…