ದಕ್ಷಿಣ ಕನ್ನಡ : ಜೀ ಕನ್ನಡ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ “ಮಹಾನಟಿ” ರಿಯಾಲಿಟಿ ಶೋ ದಲ್ಲಿ,ಮೂಡಬಿದ್ರೆ ಸಮೀಪದ ನಿಡ್ಡೋಡಿಯ ಆರಾಧನಾ ಭಟ್ ಉತ್ತಮ ಪ್ರದರ್ಶನ ನೀಡಿ ಕರ್ನಾಟಕದ ಮನೆಮಾತಾಗಿದ್ದಾರೆ, ಕರಾವಳಿಯ ಮನೆಮಗಳಾದ ಆರಾಧನಾ ಭಟ್ ಈಗ ನಾಡಿನಾದ್ಯಂತ ಎಲ್ಲರ ಮೆಚ್ಚುಗೆ ಪಾತ್ರವಾಗಿ ಭೇಷ್ ಎನಿಸಿಕೊಂಡಿದ್ದಾರೆ.
ಜೀ ಕನ್ನಡದ” ಮಹಾನಟಿ” ವಿನೂತನ ರಿಯಾಲಿಟಿ ಶೋ ಕಾರ್ಯಕ್ರಮ ನಾಡಿನಾದ್ಯಂತ ಜನಮನ್ನಣೆ ಗಳಿಸಿದ್ದು, ಕಾರ್ಯಕ್ರಮ ಆರಂಭಕ್ಕೂ ಮುನ್ನ ನಡೆದ ಆಡಿಷನ್ನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕ ಮಾತ್ರ ಪ್ರತಿಭೆ ಆರಾಧನಾ ಭಟ್ರ ಸಾಧನೆಗಾಗಿ ಜೀ ಕನ್ನಡ ದೃಶ್ಯಮಾಧ್ಯಮ ಬೆಂಗಳೂರಿನ ಗಾಂಧಿನಗರದಲ್ಲಿ ಬೃಹತ್ ಕಟೌಟ್ ಅಳವಡಿಸಿ ಪ್ರೋತ್ಸಾಹಿಸುವುದರ ಮೂಲಕ ಅಭಿನಂದಿಸಿದ್ದಾರೆ.
ಇವರು ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿ, ಅಲ್ಲಿಯೂ ಸೈ ಎನಿಸಿಕೊಂಡು, ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರು ಮತ್ತು ಬೋಧಕ ಶಿಕ್ಷಕರಿಂದ, ಮತ್ತು ಇತರ ನೌಕರರಿಂದ ಅಲ್ಲದೆ ಸಹಪಾಠಿ ವಿದ್ಯಾರ್ಥಿಗಳಿಂದ ಪ್ರಶಂಸೆಗೆ ಪಾತ್ರರಾದ ಕರಾವಳಿ ಮನೆಮಗಳು ಆರಾಧನಾ, ಹಲವಾರು ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ನಂತಹ ಬೃಹತ್ ವೇದಿಕೆಗಳಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಜೂನಿಯರ್ ಅನುಶ್ರೀ ಎಂದು ಆರಾಧನಾ ಹೆಸರುವಾಸಿಯಾಗಿದ್ದಾರೆ, ಪ್ರಸ್ತುತ ಮಹಾನಟಿ ಕಾರ್ಯಕ್ರಮದಲ್ಲಿ ಸ್ವತಹ ಅನುಶ್ರೀ ಇದನ್ನು ಒಪ್ಪಿಕೊಂಡಿದ್ದಾರೆ.
ಮಹಾನಟಿ ಕಾರ್ಯಕ್ರಮದ ಜಡ್ಜಸ್ ಗಳಿಂದ ಪ್ರಶಂಸೆಗೆ ಪಾತ್ರರಾಗಿರುವ ಆರಾಧನಾರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವರು, ಪ್ರಾಂಶುಪಾಲರಾದ ಕುರಿಯನ್, ವಿವೇಕ್ ಆಳ್ವರು ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ಸಾಧನೆಗಾಗಿ ಅಭಿನಂದಿಸಿದ್ದಾರೆ
ಮಜಾ ಭಾರತ ಖ್ಯಾತಿಯ ಆರಾಧನಾ ಭಟ್ಟರು ಮತ್ತು ತಾಯಿ ಪದ್ಮಶ್ರೀ ಭಟ್ ಜೊತೆಗೂಡಿ ಆರದಿರಲಿ ಬದುಕು ಮತ್ತು ವಾಯ್ಸ್ ಆಫ್ ಆರಾಧನಾ ಎಂಬ ಸ್ವತಂತ್ರ ಸಂಸ್ಥೆಯನ್ನು ಸಮಾನ ಮನಸ್ಕರೊಂದಿಗೆ ಕೆಲವು ವರ್ಷಗಳ ಹಿಂದೆ ಆರಂಭಿಸಿ, ಬಡ ಅನಾರೋಗ್ಯ ಪೀಡಿತರ ಪಾಲಿನ ಆರಾಧ್ಯರಾಗಿದ್ದಾರೆ, ತಮ್ಮ ಸಂಸ್ಥೆಯಿಂದ ನೀಡುವ ಸರ್ಕಾರಿ ಶಾಲಾ ಯೋಜನೆಯಲ್ಲಿ, ಶಾಲೆಗೆ ಬೇಕಾದ ಪರಿಕರಗಳನ್ನು, ಮುಖ್ಯಸ್ಥರೊಂದಿಗೆ ಚರ್ಚಿಸಿ ನೀಡುತ್ತಾ ಬಂದಿದ್ದು ಇವರ ಈ ಎಲ್ಲ ಸಾಮಾಜಿಕ ಕಳಕಳಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ, ಅಲ್ಲದೆ ಸಾಂಸ್ಕೃತಿಕವಾಗಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವಕಾಶ ನೀಡಿ, ಪ್ರೋತ್ಸಾಹಿಸಿ ಈಗ ಅದೆಷ್ಟೋ ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದ್ದು, ಪೋಷಕರ ಪಾಲಿನ ಆಶಾಕಿರಣವಾಗಿದ್ದಾರೆ.
ಆರಾಧನಾ ಭಟ್ಟರ ಈ ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳನ್ನು ಗುರುತಿಸಿ ಹಲವಾರು ಪ್ರಶಸ್ತಿ ಸನ್ಮಾನಗಳು ದೊರಕಿದೆ
ಪ್ರಸ್ತುತ ಮಹಾನಟಿ ಕಾರ್ಯಕ್ರಮದಲ್ಲಿ ಆರಾಧನಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಕರಾವಳಿಯ ಈ ಬೆಡಗಿ ಮುಂದೆ ಹೆಸರಾಂತ ಚಲನಚಿತ್ರ ನಟಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…
ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಸ್ಥಳಿಯರು ಶ್ರಮ…
ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು…
ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ…
ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಹತ್ತಿರ ಜೂನ್ 11 ರಂದು ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದವರನ್ನು ಬಂಧಿಸಲಾಗಿದೆ.…