ಜನ ಮನದ ನಾಡಿ ಮಿಡಿತ

Advertisement

ಮೂಡುಬಿದಿರೆಯಲ್ಲಿ ರಾಸಾಯನಿಕ ಬಳಸಿದ ಹಣ್ಣುಗಳ ಮಾರಾಟ: ಅಧಿಕಾರಿಗಳಿಂದ ತಪಾಸಣೆ

ಮೂಡುಬಿದಿರೆ: ರಾಸಾಯನಿಕ ಬಳಸಿದ ಹಣ್ಣುಗಳನ್ನು ವಾಹನಗಳಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದನ್ನು ಸಾರ್ವಜನಿಕರ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳ ತಂಡವು ಶುಕ್ರವಾರ ಮೂಡುಬಿದಿರೆಯಲ್ಲಿ ತಪಾಸಣೆ ನಡೆಸಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಕಳೆದ ಕೆಲವು ಸಮಯಗಳಿಂದ ವಿವಿಧ ಹಣ್ಣುಗಳ ಸೀಸನ್ ಸಮಯದಲ್ಲಿ ವಾಹನದಲ್ಲಿ ತಂದು ಮೂಡುಬಿದಿರೆ ಪೇಟೆಯ ರಸ್ತೆ ಬದಿಗಳಲ್ಲಿ ನಿಲ್ಲಿಸಿ ಹಾಗೂ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ್ದರು.

ರಾಸಾಯನಿಕ ಪೌಡರನ್ನು ಬಳಸಿ ಮಾವಿನ ಹಣ್ಣುಗಳನ್ನು ಉತ್ತಮ ಕಲರ್ ಬರುವಂತೆ ಮಾಡಿ ಗ್ರಾಹಕರನ್ನು ಕಣ್ಮನ ಸೆಳೆಯುವಂತೆ ಮಾಡಿ ವ್ಯಾಪಾರ ಕುದುರಿಸುತ್ತಿದ್ದ ವ್ಯಾಪಾರಿಗಳ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಅಧಿಕಾರಿ ಡಾ.ಪ್ರವೀಣ್‌, ಪುರಸಭಾ ಆರೋಗ್ಯ ನಿರೀಕ್ಷಕಿ

ಶಶಿರೇಖಾ ಮತ್ತು ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ನಟರಾಜ್ ಅವರು ವಾರದ ಸಂತೆಯ ದಿನವಾಗಿರುವ ಶುಕ್ರವಾರದಂದೇ ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ ವಾಹನದಲ್ಲಿ ಮತ್ತು ಬಾಕ್ಸ್ ನಲ್ಲಿ ಮಾವಿನ ಹಣ್ಣುಗಳನ್ನಿಟ್ಟು ಮಾರಾಟ ಮಾಡುತ್ತಿದ್ದ ಹಣ್ಣುಗಳ ಮಧ್ಯೆ “ಇಥಿಲೀನ್ ರೈಪನರ್” ಎಂಬ ಹೆಸರಿನ ರಾಸಾಯನಿಕ ಫೌಡರನ್ನು ಒಳಗೊಂಡ ಪ್ಯಾಕೆಟನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಈ ರಾಸಾಯನಿಕ ಪದಾರ್ಥವು ಎಲುಬಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಇದನ್ನು ನೀವು ಜನರಿಗೆ, ಪುಟ್ಟ ಮಕ್ಕಳಿಗೆ ಎಷ್ಟು ತಿನ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಬಗ್ಗೆ ತಮಗೇನು ಗೊತ್ತಿಲ್ಲ ನಾವು ವ್ಯಾಪಾರ ಮಾಡುವವರು ನಮ್ಮ ಮಕ್ಕಳಿಗೂ ನಾವು ಇದೇ ಹಣ್ಣನ್ನು ತಿನ್ನಲು ತೆಗೆದುಕೊಂಡು ಹೋಗುವುದು. ತಮಿಳುನಾಡಿನಿಂದ ಬರುವ ಈ ಹಣ್ಣುಗಳನ್ನು ನಾವು ಮಂಗಳೂರಿನಿಂದ ಖರೀದಿಸಿ ತರುತ್ತೇವೆ. ನಾವು ಇದನ್ನು ಮಾರಾಟ ಮಾಡದಿದ್ದರೆ ತಮಗೆ ನಷ್ಟ ಉಂಟಾಗುತ್ತದೆ ಎಂದು ತಿಳಿಸಿದರು.

ವಾಹನಗಳ ನಂಬ‌ರ್ ಮತ್ತು ವ್ಯಾಪರಿಗಳ ಮೊಬೈಲ್ ನಂಬರನ್ನು ಅಧಿಕಾರಿಗಳು ಪಡೆದುಕೊಂಡರು. ಆದರೆ ವ್ಯಾಪಾರಿಗಳು ಸಂಜೆವರೆಗೂ ಹಣ್ಣುಗಳನ್ನು ಮಾರಾಟ ಮಾಡಿದರು.

ರಾಸಾಯನಿಕ ಪದಾರ್ಥಗಳನ್ನು ಬಳಸಿದ ಹಣ್ಣುಗಳನ್ನು ಮಾರಾಟ ಮಾಡದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!