ಜನ ಮನದ ನಾಡಿ ಮಿಡಿತ

Advertisement

ಮಾನವನ ಬುದ್ಧಿಮತ್ತೆಯನ್ನು ಮೀರಿಸುವ ಸೂಪರ್‌ಇಂಟೆಲಿಜೆಂಟ್ AI ಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಸ್ಯಾನ್ ಫ್ರಾನ್ಸಿಸ್ಕೋ : ತನ್ನ ಸೂಪರ್ ಇಂಟೆಲಿಜೆಂಟ್ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಉನ್ನತ ಮಷಿನ್​​ ಲರ್ನಿಂಗ್ ಸಂಶೋಧಕರು ಮತ್ತು ಎಂಜಿನಿಯರ್‌ಗಳ ತಂಡವನ್ನು ನಿಯೋಜಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಒಡೆತನದ OpenAI ಹೇಳಿದೆ.

ಸೂಪರ್ ಇಂಟೆಲಿಜೆನ್ಸ್ ಪರಿಕಲ್ಪನೆಯು ವಿಭಿನ್ನ ಕೌಶಲ್ಯಗಳ ವ್ಯಾಪಕ ಶ್ರೇಣಿಯಲ್ಲಿ ಉತ್ತಮವಾಗಿರುವ ಒಂದು ಕಾಲ್ಪನಿಕ AI ಮಾಡೆಲ್ ಆಗಿದೆ. ಇದು ಕೆಲ ಹಿಂದಿನ ಪೀಳಿಗೆಯ ಒಂದೇ ಡೊಮೇನ್‌ ಮಾದರಿಗಿಂತ ಭಿನ್ನವಾಗಿವೆ.

ಓಪನ್‌ಎಐನ ಮುಖ್ಯ ವಿಜ್ಞಾನಿ ಮತ್ತು ಕಂಪನಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಇಲ್ಯಾ ಸುಟ್‌ಸ್ಕೇವರ್ ಮತ್ತು ಸಂಶೋಧನಾ ಲ್ಯಾಬ್‌ನ ಅಲೈನ್‌ಮೆಂಟ್ ಮುಖ್ಯಸ್ಥ ಜಾನ್ ಲೈಕ್ ಇವರು ಜಂಟಿಯಾಗಿ ಹೊಸ ತಂಡದ ನೇತೃತ್ವ ವಹಿಸಲಿದ್ದಾರೆ.

“ಸೂಪರ್ ಇಂಟೆಲಿಜೆನ್ಸ್ ಇದು ಮಾನವರು ಆವಿಷ್ಕರಿಸಿದ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನವಾಗಿದೆ ಮತ್ತು ಪ್ರಪಂಚದ ಅನೇಕ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡುತ್ತದೆ. ಆದರೆ, ಸೂಪರ್ ಇಂಟೆಲಿಜೆನ್ಸ್‌ನ ಬೃಹತ್ ಶಕ್ತಿಯು ತುಂಬಾ ಅಪಾಯಕಾರಿಯಾಗಿದೆ ಮತ್ತು ಮಾನವೀಯತೆಯ ವಿನಾಶಕ್ಕೆ ಅಥವಾ ಮಾನವರ ಅಳಿವಿಗೆ ಕಾರಣವಾಗಬಹುದು” ಎಂದು ಓಪನ್ ಎಐ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.

ಕಂಪನಿಯ ಪ್ರಕಾರ, ಇಂಥದೊಂದು ಮಾಡೆಲ್ ಈ ದಶಕದ ಅಂತ್ಯದ ಮೊದಲು ಸಿದ್ಧವಾಗಬಹುದು. ಸೂಪರ್ ಇಂಟೆಲಿಜೆನ್ಸ್ ಜೋಡಣೆಯ ಸಮಸ್ಯೆಯನ್ನು ಪರಿಹರಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ತಾನು ಇಲ್ಲಿಯವರೆಗೆ ಪಡೆದುಕೊಂಡಿರುವ ಕಂಪ್ಯೂಟ್‌ನ 20 ಪ್ರತಿಶತವನ್ನು ಸಮರ್ಪಿಸುವುದಾಗಿ ಕಂಪನಿ ಹೇಳಿದೆ.

ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್ (ASI) ಎನ್ನುವುದು ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯಾಗಿದ್ದು, ಇದು ಹಲವಾರು ವಿಚಾರಗಳಲ್ಲಿ ಮಾನವರ ಬೌದ್ಧಿಕ ಶಕ್ತಿಗಳನ್ನು ಮೀರಿಸಲಿದೆ. ASI ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಮತ್ತು ಇದೊಂದು ಕಾಲ್ಪನಿಕ ಸ್ಥಿತಿಯಾಗಿದೆ. ಎಎಸ್​ಐ ಸಾಮಾನ್ಯ ಕೃತಕ ಬುದ್ಧಿಮತ್ತೆ (AI) ಗಿಂತ ಭಿನ್ನವಾಗಿದೆ. ಇದು ಮಾನವ ಬೌದ್ಧಿಕ ಸಾಮರ್ಥ್ಯಗಳ ಸಾಫ್ಟ್‌ವೇರ್ ಆಧಾರಿತ ಸಿಮ್ಯುಲೇಶನ್ ಅನ್ನು ಒಳಗೊಂಡಿರುತ್ತದೆ. ಉದಾಹರಣೆಗೆ- ಮಾಹಿತಿಯ ಸ್ವಾಧೀನದ ಮೂಲಕ ಕಲಿಕೆ, ತಾರ್ಕಿಕತೆ ಮತ್ತು ಸ್ವಯಂ-ತಿದ್ದುಪಡಿಗಳು ಇದರ ವಿಶೇಷತೆಗಳಾಗಿರುತ್ತವೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!