ಸರಗೂರು- ತಾಲೋಕಿನ ಕೂಡುಗಿ ಹಾಡಿಯಲ್ಲಿ ಹಾಡಿ ಸಭೆಮಾಡಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೂಡುಗಿ ಹಾಡಿ ಸರಗೂರು ತಾಲೂಕಿನ ಕಾಡಂಚಿನ ಹಾಡಿಯಾಗಿದ್ದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು, ಆಶ್ರಯ ಹಸ್ತ ಟ್ರಸ್ಟ್, ಬೆಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಡಗಲಪುರ ಹಾಗೂ ಸಮುದಾಯ ಸಹಭಾಗಿತ್ವದಿಂದ ಕೂಡುಗಿ ಹಾಡಿಯಲ್ಲಿ ಹಾಡಿ ಸಭೆಯನ್ನು ಹಮ್ಮಿಕೊಂಡು ಆದಿವಾಸಿ ಮೂರು ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು.
ಸಂಸ್ಥೆಯ ಸ್ಥಾಪಕರಾದ ವೆಂಕಟಸ್ವಾಮಿ ಮಾತಾನಾಡಿ ಅಂಗನವಾಡಿ ಕಟ್ಟಡವಿಲ್ಲದೆ ಇದ್ದು ಸರ್ಕಾರದ ಜೊತೆ ಸಾಕಷ್ಟು ಅರ್ಜಿಗಳನ್ನು ಸತತವಾಗಿ ಕೊಟ್ಟು ಸತತ ಪ್ರಯತ್ನದಿಂದ ಈ ಹಾಡಿಯಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಆಗುತ್ತಿರುವ ಬಗ್ಗೆ ಚರ್ಚಿಸಲಾಯಿತು ಮತ್ತು
ತಾಯಿ ಮತ್ತು ಮಕ್ಕಳ ಆರೋಗ್ಯ ಉತ್ತಮ ಪಡಿಸಲು ಗರ್ಭಿಣಿಯರು ಪೌಷ್ಟಿಕ ಆಹಾರದ ಸೇವನೆ ಜೊತೆಗೆ ಆಸ್ಪತ್ರೆಯ ಹೆರಿಗೆಯ ಅನುಕೂಲಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಸ್ಥೆಯ ಸ್ಥಾಪಕರಾದ ವೆಂಕಟಸ್ವಾಮಿ ಹಾಡಿಯ ಯಜಮಾನರಾದ ಮಾಣಬ, ಆಶಾ ಕಾರ್ಯಕರ್ತೆಯರಾದ ಶಶಿಕಲಾ, ಸಂಸ್ಥೆಯ ಮೇಲ್ವಿಚಾರಕಾರದ ಜಯರಾಮ್, ಆರೋಗ್ಯ ಕಾರ್ಯಕರ್ತರಾದ ಮಹೇಶ ಬಿ, ಹಾಡಿಯ ಗರ್ಭಿಣಿಯರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.



