ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾಸುದೇವ ಕುಡ್ವಾ ಕುಟುಂಬಿಕರ ಶಾಶ್ವತ ಸೇವೆಯಾಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವವು ವಿಶೇಷ ರೀತಿಯಲ್ಲಿ ಮಂಗಳವಾರ ಸಂಪನ್ನಗೊಂಡಿತು.

ಸಂಜೆ ದೇವಳದ ವೇದ ಪಾಠ ಶಾಲೆಯಲ್ಲಿ ವಿಶೇಷ ಪೂಜೆ ಅಭಿಶೇಕ ಸಹಿತ ಶ್ರೀನಿವಾಸ ದೇವರ ದಿಬ್ಬಣ್ಣ ದೇವಳ ತಲುಪಿದ ಬಳಿಕ ಎದುರುಕಾಣಿಸಿಕೊಂಡು ವರೋಪಚಾರ ಪೂಜೆ , ದೇವಳದಲ್ಲಿ ಪೂಜೆ, ಉತ್ಸವ ದೇವರು ಹೊರಟು ವಿಶ್ರಾಂತಿ ಮಂಟಪಕ್ಕೆ ಆಗಮನ ಬಳಿಕ ಶ್ರೀನಿವಾಸ ದೇವರ ವರೋಪಚಾರ,ಕನ್ಯಾಗಮನ, ಮಾಲಾಧಾರಣೆ ಕನ್ಯಾದಾನ ಲಾಜಹೋಮ ಸಹಿತ ವಿವಿಧ ಪೂಜಾ ಪುನಸ್ಕಾರ ಬಳಿಕ ದೇವರ ಸನ್ನಿಧಿಯಲ್ಲಿ ಪೂಜೆ ಪ್ರಸಾದ ವಿತರಣೆ ಮತ್ತು ಭೂರಿ ಸಮಾರಾಧನೆಯೊಂದಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವವು ಸಂಪನ್ನ ಗೊಂಡಿತು.



