ಮೂಲ್ಕಿ : ಕಿನ್ನಿಗೋಳಿ ಸಮೀಪದ ಪುನರೂರುನ ಕದ್ರೋಲ್ ನಿವಾಸಿ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಪೋಸ್ತ್ ಮ್ಯಾನ್ ವಿಠಲ ಶೆಟ್ಟಿ ( 89) ಮೇ 13 ರಂದು ಮುಂಬಯಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು
. ಮೃತರು ಪತ್ನಿ , ಇಬ್ಬರು ಪುತ್ರರು , ಪುತ್ರಿಯನ್ನು ಅಗಲಿದ್ದಾರೆ. ಅವರು ಬಾಲ್ಯದಲ್ಲಿ ಪುನರೂರು ಮೇಳದಲ್ಲಿ ವೇಷದಾರಿಯಾಗಿ ,ಚೆಂಡೆ ಮದ್ದಳೆ ವಾದಕರಾಗಿಯೂ ಗುರುತಿಸಿಕೊಂಡವರು. ಬಪ್ಪನಾಡು ಯಕ್ಷಗಾನ ಮಂಡಳಿಯ ವಾರದ ತಾಳಮದ್ದಳೆ ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಹಲವಾರು ಕಡೆ ಸಮ್ಮಾನಗಳು ಸಂದಿದ್ದು ವೃತ್ತಿಯಲ್ಲಿ ಪುನರೂರು ಶಾಖಾ ಅಂಚೆ ಕಚೇರಿಯಲ್ಲಿ ಪೋಸ್ಟ್ ಮೆನ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಕಳೆದ ಒಂದು ವಾರದಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು…
ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಗುತ್ತಿಗೆದಾರ ಸಂಸ್ಥೆಯಾದ ಕೆಎನ್‌ಆರ್‌ಸಿಎಲ್ ಕಂಪನಿಯು ಪಾಣೆಮಂಗಳೂರು ಹಳೆಯ…
ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ ಬಳಿಕ, ಯುಎಸ್ ಸರ್ಕಾರ…
ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಸದ್ಯ ತೀರಾ ಕಷ್ಟಕರವಾಗಿದೆ ಎಂದು ಅಧ್ಯಕ್ಷ ಮಸೌದ್…
ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗದೆ, ಸಮುದ್ರದಲ್ಲಿ ಮೀನುಗಳ ಸಮೃದ್ಧಿ ಇರಲಿ ಹಾಗೂ ಮೀನುಗಾರಿಕೆಗೆ ತೆರಳುವ ವೇಳೆ ಯಾವುದೇ ಅನಾಹುತ ಸಂಭವಿಸದಿರಲಿ…
ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮಂಗಳೂರು–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ–169ರ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಭೂಕುಸಿತ ಆರಂಭವಾಗಿದೆ. ಗುಡ್ಡದಿಂದ…