ಸರಗೂರು :ತಾಲ್ಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಬುಧವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳು ರೈತರ ಬಾಳೆ ತೋಟವನ್ನು ತುಳಿದು ನಾಶ ಮಾಡಿವೆ.

ಹಾದನೂರು ಗ್ರಾಮದ ಪ್ರಕಾಶ್ ಅವರ ತೋಟಗಳಲ್ಲಿ ಮೂರು ಕಾಡಾನೆಗಳು ಸಂಚರಿಸಿ ಬಾಳೆಗಿಡಗಳನ್ನು ತಿಂದು ನಾಶ ಮಾಡಿವೆ, ತೋಟಗಳಲ್ಲಿಯೇ ಲದ್ದಿ ಹಾಕಿ ಹೋಗಿವೆ.
ಕಳೆದ ಕೆಲವು ದಿನಗಳ ಹಿಂದೆಯೂ ಈಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ 1 ಎಕರೆ ಜಮೀನಿನಲ್ಲಿ ಬಾಳೆ ಹಾಕಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು, ಮತ್ತೇ ಕಾಡಾನೆ ದಾಳಿ ಗ್ರಾಮದಲ್ಲಿ ಮುಂದುವರೆದಿದ್ದು ಗ್ರಾಮಸ್ಥರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ.
ಕಾಡಾನೆಗಳ ಸ್ಥಳಾಂತರಕ್ಕೆ ಒತ್ತಾಯ
ಭಾಗದ ಕಾಡಂಚಿನ ಪಕ್ಕದಲ್ಲಿ ರೈಲು ಕಂಬಿಗಳನ್ನು ಅಳವಡಿಸಿದ್ದರು ಅದರೆ ಗುತ್ತಿಗೆದಾರ ಕಳಪೆ ಗುಣಮಟ್ಟದ ರೈಲು ಕಂಬಿಗಳನ್ನು ಅಳವಡಿಸಿ ಕಂಬಿಗಳ ಒಳಗಡೆಯಿಂದ ನುಕ್ಕಿಕೊಂಡು ಬಂದು ಬೆಳೆಗಳನ್ನು ನಾಶ ಮಾಡುತ್ತಿದ್ದೇವೆ, ಇದರಿಂದ ಪ್ರದೇಶದಲ್ಲಿ ಕಾಡಾನೆಗಳ ಉಪಟಳವಿದೆ.
ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಕಾಡಾನೆಗಳು ಊರಿಗೆ ಬರುತ್ತಿದ್ದು ಬೆಳೆ ಹಾನಿ ಮಾಡಿ ರೈತರು ಕಂಗಾಲಾಗುತ್ತಿದ್ದಾರೆ. ಹಲವು ಕಡೆ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ತೋಟದ ಕಾರ್ಮಿಕರು, ಶಾಲಾ ಮಕ್ಕಳು ಭಯ ಪಡುವಂತಾಗಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸುವುದರ ಸಿಬ್ಬಂದಿಗಳನ್ನು ಹೆಚ್ಚು ನೇಮಕ ಮಾಡಬೇಕು.ಇಲ್ಲಿ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ.ಅದರಿಂದ ಕಾಡಾನೆಗಳನ್ನು ಸ್ಥಳಾಂತರ ಮಾಡುವ ಮುಖಾಂತರ ಶಾಶ್ವತ ಪರಿಹಾರ ಒದಗಿಸಿ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಹಾದನೂರು ಗ್ರಾಪಂ ಉಪಾಧ್ಯಕ್ಷ ಹಾದನೂರು ಪ್ರಕಾಶ್ ಒತ್ತಾಯಿಸಿದ್ದರು.



