ಕರ್ನಾಟಕ ಪತ್ರಕರ್ತರ ಸಂಘ ಮತ್ತು ಇಂಡಿಯನ್ ಯೂನಿಯನ್ ದೆಹಲಿ. ಕೈಗೊಂಡ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದ ಆಯುರ್ವೇದಿಕ್ ವೈದ್ಯರಾದ ಡಾ: ಹನಮಂತರಾವ್ ಪುರೋಹಿತ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ BB News Channel ಸಹಯೋಗದಲ್ಲಿ ಇಂದು ಗಂಜೀಹಾಳದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್ ಡಾ: H R ಪುರೋಹಿತ ಅವರಿಗೆ ಅತ್ಯುತ್ತಮ ವೈದ್ಯ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪ,ಪೂ . ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ನಭೀಸಾಬ್ ನಂದನೂರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಸಭೆ ಅಧ್ಯಕ್ಷತೆಯನ್ನು ನ್ಯಾವಾದಿಗಳು ಹಾಗೂ ಜಿಲ್ಲಾ KPS ಸಂಘದ ಕಾನೂನು ಸಲಹೆಗಾರರು ಶ್ರೀ ರವಿಕುಮಾರ್ ಪಟ್ಟದಕಲ್ಲು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀ ಮುರಳಿಧರ್ ದೇಶಪಾಂಡೆ ಹಾಗೂ ಗ್ರಾಮದ ಪ್ರಮುಖರಾದ ಶ್ರೀ ಭೀಮಣ್ಣ ಬಾನಿ, ಶ್ರೀ ದೀಲಿಫ್,ಜಾಗೀರದಾರ್, ಶ್ರೀ ದವಲಸಾಬ್ ಶೇಡಂ, ಶ್ರೀ ಸಂಗಯ್ಯ ಹಿರೇಮಠ ,ಶ್ರೀ ಚನ್ನಪ್ಪ ಗೂಳಪ್ಪನವರ,ಶ್ರೀ ಸಂಗಣ್ಣ ಸಜ್ಜನ, ಶ್ರೀ ಸಂಗಪ್ಪ ಕೌಜಗನೂರ,ಶ್ರೀ ಯಲಗೂರದಪ್ಪ ಕುರಿ,ಶ್ರೀ ಮಹಾಂತಗೌಡ ಪಾಟೀಲ,ಶ್ರೀ ದುಂಡಪ್ಪ ವೈಜಾಪೂರ,ಅನೇಕ ಪ್ರಮುಖರು ಉಪಸ್ಥಿತಿ ಇದ್ದರು.



