ಜನ ಮನದ ನಾಡಿ ಮಿಡಿತ

Advertisement

ಮೋಟಾರ್ ಸೈಕಲ್ ಕಳ್ಳತನ ಇಬ್ಬರು ಆರೋಪಿ ಬಂಧನ

ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 29 ಮೋಟಾರ ಸೈಕಲ್‌ಗಳು ಮತ್ತು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಇಳಕಲ್ ಪೊಲೀಸರು ವಶಪಡಿಸಿಕೊಂಡ್ಡಿದ್ದಾರೆ,

ದಿನಾಂಕ:15/05/2024 ರಂದು ಶ್ರೀ ಶಿವಲಿಂಗಯ್ಯ ಸೋಮಯ್ಯ ಸಂಕದ ಸಾ|| ಅಲಗುಂಡಿ
ತಾ|| ಮುಧೋಳ ಇವರು ಇಲಕಲ್ಲ ಶಹರ ಪೊಲೀಸ್ ಠಾಣೆಗೆ ಹಾಜರಾಗಿ, ಇಲಕಲ್ಲ
ಶಹರದ ಬಸವೇಶ್ವರ ಸರ್ಕಲ್ ಹತ್ತಿರ ನಿಲ್ಲಿಸಿದ ತಮ್ಮ ಮಾಲ್ಕಿಯ ಹೀರೊ ಸ್ಟೇಂಡರ್ ಪ್ಲಸ್ ಕಂಪನಿಯ ಮೋಟಾರ್
ಸೈಕಲ್ ನಂಬರ- KA-48 EA-7028 ಬೈಕ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು
ಸಲ್ಲಿಸುತ್ತಾರೆ, ಸದರಿ ದೂರಿನ ಮೆರೆಗೆ ಇಲಕಲ್ಲ ಶಹರ ಪೊಲೀಸ್ ಠಾಣೆ ಗುನ್ನೆ ನಂ-47/2024 ಕಲಂ-379 ಐಪಿಸಿ ಪ್ರಕರಣ ದಾಖಲಾಗುತ್ತದೆ, ಸದರ ಪ್ರಕರಣದ ತನಿಖೆಯನ್ನು ಕೈಗೊಂಡಾಗ, ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಒಟ್ಟು 29 ಮೋಟಾರ
ಸೈಕಲಗಳು ಮತ್ತು ಕೃತ್ಯಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಬಳಸಿ ಕಳುವು ಮಾಡಿರುವದಾಗಿ ಒಪ್ಪಿಕೊಂಡರು, ಇಳಕಲ್ ಪೊಲೀಸರು 29 ವಾಹನಗಳ ಅಂದಾಜು ಕಿಮ್ಮತ್ತು 15,00000/- ರೂಪಾಯಿಗಳು ಮಾಲನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ,

ಬಾಗಲಕೊಟೆ ಜಿಲ್ಲೆ ಅಧೀಕ್ಷಕರು ಮಾನ್ಯ ಶ್ರೀ ಅಮರನಾಥ ರೆಡ್ಡಿ ಈ ಕಾರ್ಯಕ್ಕೆ ಮೆಚ್ಚಿ, ಪ್ರಸನ್ನ ದೇಸಾಯಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ, ಮಹಾಂತೇಶ ಜಿದ್ದಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ, ಹಾಗೂ ವಿಶ್ವನಾಥರಾವ್ ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಹುನಗುಂದ ಉಪವಿಭಾಗ, ಸುನೀಲ ಸವದಿ ವೃತ್ತ ನಿರೀಕ್ಷಕರು ಹುನಗುಂದ ರವರುಗಳ ಮಾರ್ಗದರ್ಶನದಲ್ಲಿ ಸೊಮೇಶ ಗೆಜ್ಜೆ ಪಿ.ಎಸ್.ಐ ಇಲಕಲ್ಲ ಶಹರ, ಎಮ್ ಎ ಸತ್ತಿಗೌಡರ ಪಿ.ಎಸ್.ಐ ಇಲಕಲ್ಲ, ಗ್ರಾಮೀಣ ಪಿ.ಎಸ್. ಹಾಗೂ ಶ್ರೀಮತಿ ಶಕುಂತಲಾ ಬಿ ನಡುವಿನಕೇರಿ ಜನರಾದ ಎ ಹೆಚ್ ಸುತಗುಂಡಾರ,
ಪಿ.ಎಸ್.ಐ ಅಪರಾಧ ವಿಭಾಗ, ತನಿಖೆಯ ತಂಡದಲ್ಲಿಯ ಪೊಲೀಸ್ ಸಿಬ್ಬಂದಿಗಳಾದ ಆನಂದ ಗೊಲಪ್ಪನವರ, ರಜಾಕ ಎನ್ ಗುಡದಾರಿ, ಚನ್ನಪ್ಪ ಐ ಬಳಿಗೇರ, ಬಿ.ವಿ.ಕಟಗಿ, ರವಿಕುಮಾರ ಕಂಕಣಮೇಲಿ,
ಅಮರೇಶ, ಗ್ಯಾರಡ್ಡಿ, ಮಹಾಂತೇಶ ಬೋಳರೆಡ್ಡಿ, ಮಂಜು ಹುನಗುಂದ, ನಬಿ ಖಾಲೆಖಾನ ಮತ್ತು ಬಾಗಲಕೋಟ ಗಣಕಯಂತ್ರ ವಿಭಾಗದ ಚಂದ್ರು ಜಟ್ಟೆಪ್ಪಗೋಳ, ಬಸು ಜಗಲಿ, ಮುತ್ತು ಬಿಸನಾಳ, ಬುಡ್ಡಾ ವಾಲಿಕಾರ, ಮಂಜು ಬಡಿಗೇರ ರವರ ಆರೋಪಿತರಿಂದ ಒಟ್ಟು 29 ಮೋಟಾರ ಸೈಕಲ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಅಂದಾಜು ಕಿಮ್ಮತ್ತು 15,00000/- ರೂಪಾಯಿಗಳ ಕಿಮ್ಮತ್ತಿನ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.
ಹಾಗೂ ಎಪಿಸಿಗಳಾದ
ಸದರ ಪ್ರಕರಣಗಳನ್ನು ಭೇದಿಸಿದಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ ರವರು
ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ,

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!