ಜನ ಮನದ ನಾಡಿ ಮಿಡಿತ

Advertisement

ಅಧಿವೇಶನದ ವೇಳೆ ತೀವ್ರ ಮಾತಿನ ಚಕಮಕಿ, ಐವರು ಶಾಸಕರು ಅಮಾನತು, ಕ್ರಮ.

ತ್ರಿಪುರ: ವಿಧಾನಸಭೆ ಕಲಾಪದಲ್ಲಿ ಇಂದು ಆಡಳಿತಾರೂಢ ಬಿಜೆಪಿ ಮತ್ತು ತಿಪ್ರಾ ಮೋಥಾ ಪಕ್ಷ ಸೇರಿ ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಸದನದ ಬಾವಿಗೆ ಇಳಿದು ಗಲಭೆ ಉಂಟು ಮಾಡಿ ಶಾಸಕರು ಯುದ್ಧವನ್ನೇ ಸೃಷ್ಟಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಸ್ಪೀಕರ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸಿದ್ದಾರೆ. ಇಂದು ಬೆಳಗ್ಗೆ ಕಲಾಪದಲ್ಲಿ ಪ್ರತಿಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಅವರು ಬಾಗ್ಬಾಶಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜದಾವ್ಲಾಲ್ ನಾಥ್ ಇತ್ತೀಚಿಗೆ ಸದನದಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ ವಿಷಯದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆದರೆ, ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದ ಸ್ಪೀಕರ್, ಪ್ರಮುಖ ವಿಷಯಗಳ ಚರ್ಚೆ ನಂತರ ತಮ್ಮ ಬಳಿಗೆ ಹಿಂತಿರುಗಿ ಎಂದು ಸೂಚಿಸಿದರು. ಇದರಿಂದ ಪ್ರತಿಪಕ್ಷಗಳ ಶಾಸಕರು ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಸ್ಪೀಕರ್ ಕುರ್ಚಿಯತ್ತ ಶಾಸಕರು ನುಗ್ಗಲು ಯತ್ನಿಸಿದರು. ಈ ವೇಳೆ, ವಿಧಾನಸಭೆಯ ಸಿಬ್ಬಂದಿ ಸ್ಪೀಕರ್ ಪೀಠದ ಬಳಿ ಭದ್ರತೆಯನ್ನು ಕಲ್ಪಿಸಿದರು. ಮಹಿಳಾ ಶಾಸಕರು ಸೇರಿ ಮೇಜುಗಳ ಮೇಲೆ ಹತ್ತಿ ಬೊಬ್ಬೆ ಹೊಡೆಯುತ್ತಾ ಸಂಧಿಗ್ಧ ವಾತಾವರಣ ಸೃಷ್ಟಿ ಮಾಡಿದರು. ಹೀಗಾಗಿ ಇಡೀ ಕಲಾಪವು ಗೊಂದಲದ ವಾತಾವರಣವಾಗಿ ಬದಲಾಯಿತು.

ಸದನದ ಶಾಸಕರ ವರ್ತನೆಯನ್ನು ಸ್ಪೀಕರ್ ಬಿಸ್ವಬಂಧ್ ಸೇನ್ ಖಂಡಿಸಿದರು. ಅಲ್ಲದೇ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಿಪ್ರಾ ಮೋಥಾ ಪಕ್ಷದ ಮೂವರು ಹಾಗೂ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಕ್ಷದ ತಲಾ ಇಬ್ಬರು ಸೇರಿ ಐವರು ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದರು. ತಿಪ್ರಾ ಮೋಥಾ ಪಕ್ಷದ ಬ್ರಿಸ್ವಕೇತು ದೆಬ್ಬರ್ಮಾ, ನಂದಿತಾ ರಿಯಾಂಗ್ ಮತ್ತು ರಂಜಿತ್ ದೆಬ್ಬರ್ಮಾ ಹಾಗೂ ಸಿಪಿಐ(ಎಂ) ಶಾಸಕ ನಯನ್ ಸರ್ಕಾರ್, ಕಾಂಗ್ರೆಸ್‌ನ ಸುದೀಪ್ ರಾಯ್ ಬರ್ಮನ್ ಅವರನ್ನು ಸ್ಪೀಕರ್ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದರು. ಆದರೆ, ಸ್ಪೀಕರ್ ಅವರ ನಿರ್ಧಾರ ವಿರೋಧಿಸಿದ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ ಹೊರಟರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!