ಜನ ಮನದ ನಾಡಿ ಮಿಡಿತ

Advertisement

ಕಾರ್ಪಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಅಂಬರಪ್ಪು ಫ್ಯಾಮಿಲಿ” ತುಳು ವೆಬ್ ಸೀರೀಸ್ ಮಹೂರ್ತ

ಪುತ್ತೂರು: ಫೋಕಸ್ ಫಿಲಂ ಫ್ಯಾಕ್ಟರಿ ಅರ್ಪಿಸುವ, ಸವಿ – ಅಮೋಘವರ್ಷಿಣಿ ನಿರ್ಮಾಣದ ,ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ಹೊಸ ತುಳು ವೆಬ್ ಸೀರೀಸ್ “ಅಂಬರಪ್ಪು ಫ್ಯಾಮಿಲಿ” ಯ ಚಿತ್ರೀಕರಣದ ಮಹೂರ್ತವು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಕ್ಯಾಮರಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಮಹೂರ್ತ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ, ಸುಧಾಕರ್ ರಾವ್ ಆರ್ಯಾಪು ಪ್ರಾರ್ಥನೆ ನೆರವೇರಿಸಿ ಚಿತ್ರತಂಡಕ್ಕೆ ಶುಭ ಆಶೀರ್ವಾದ ನೀಡಿದರು.ಪುತ್ತೂರಿನ ಉದ್ಯಮಿ ಶ್ರೀ ಶಿವರಾಮ್ ಆಳ್ವ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು.
ತುಳುವಿನ ಹಿಟ್ ಧಾರಾವಾಹಿ “ಅಂಬರ ಮರ್ಲೆರ್” returns ತಂಡವು ಈ ಬಾರಿ ಹೊಸ ತುಳು ವೆಬ್ ಸೀರೀಸ್ ನೊಂದಿಗೆ ಬರುತ್ತಿದೆ. ವೆಬ್ ಸೀರೀಸ್ ನ ನಾಯಕ ನಟರಾಗಿ ನವೀನ್ ನೆರೋಲ್ತಡಿ ಅಭಿನಯಿಸುತ್ತಿದ್ದು ನಾಯಕಿಯಾಗಿ ಸಿಂಚನ ಪಿ ರಾವ್ ಬಣ್ಣ ನಟಿಸುತ್ತಿದ್ದಾರೆ. ತುಳುವಿನ ಹಾಸ್ಯ ದಿಗ್ಗಜರಾದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಸುನಿಲ್ ನೆಲ್ಲಿಗುಡ್ಡೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಉಳಿದಂತೆ ರಂಜನ್ ಬೋಳೂರು ,ಯದು ವಿಟ್ಲ, ಪ್ರತ್ವಿನ್ ಪೊಳಲಿ, ನಮಿತಾ ಕಿರಣ್, ಜಗನ್ನಿವಾಸ್ ಶೆಟ್ಟಿ,ಅಮಿತ್ ಪ್ರಭು, ಅಶೋಕ್ ಬನ್ನೂರು ಹಾಗೂ ಮುಂತಾದಾವರು ನಟಿಸಲಿದ್ದಾರೆ.
ಕಥೆ, ಚಿತ್ರಕಥೆ,ನಿರ್ದೇಶನದ ಜವಾಬ್ದಾರಿ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ವಹಿಸುತ್ತಿದ್ದು ಸಂಭಾಷಣೆಯನ್ನು ಸೋಮನಾಥ ಶೆಟ್ಟಿ ಮಂಗಲ್ಪಾಡಿ ಬರೆದಿದ್ದಾರೆ. ಛಾಯಾಗ್ರಹಣ ಹಾಗೂ ಸಂಕಲನ ಧನರಾಜ್ ರೈ ಪುತ್ತೂರು, ಸಂಗೀತ ಡೋಲ್ವಿನ್ ಕೊಳಲಗಿರಿ, ಪ್ರಸಾದನ ಪ್ರಸಾದ್ ಕೊಯಿಲ, ಪ್ರಚಾರ ಕಲೆ ಗಣೇಶ್ ಕೆ, ಧ್ವನಿ ಮುದ್ರಣ ಕಿಶೋರ್ ಕುಮಾರ್ ಉಪ್ಪಿನಂಗಡಿ, ಬೆಳಕು ಸಹಾಯ ಪ್ರಜ್ವಲ್ ಆಚಾರ್ಯ , ಬೆಳಕು ಹಾಗೂ ಧ್ವನಿ ಮುದ್ರಣ ಯುನಿಟ್ ರಾಜ್ ಪ್ರೊಡಕ್ಷನ್ಸ್ ಪುತ್ತೂರು ತಾಂತ್ರಿಕ ತಂಡದಲ್ಲಿ ಇದ್ದಾರೆ.
ಪುತ್ತೂರಿನ ಆಸುಪಾಸಿನಲ್ಲಿ ಈ ವೆಬ್ ಸೀರೀಸ್ ನ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡದ ಮುಖ್ಯಸ್ಥರಾದ ಸುಂದರ್ ರೈ ಮಂದಾರ ತಿಳಿಸಿದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!