ಕಿನ್ನಿಗೋಳಿ : ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಯಕ್ಷಗಾನದಲ್ಲಿ ನೇರ ಪ್ರಸಾರದ ಸೇವೆಯ ಮೂಲಕ ಲಕ್ಷಾಂತರ ವೀಕ್ಷಕರ ಮನಸೂರೆಗೈದ ಹಾಗೂ ವಿನೂತನ ಪ್ರಸಾರದ ಮೂಲಕ ಅದ್ಭುತವಾಗಿ ಚಾಪು ಮೂಡಿಸುತ್ತಿರುವ ಶ್ರೀಯುತ ಪ್ರೇಮನಾಥ್ ಪೂಜಾರಿ ಮುನ್ನಡೆಸುತ್ತಿರುವ ಯಕ್ಷ ರಿಶು ತಂಡ ವಿವಿಧ ಯಕ್ಷಗಾನ ಕಾರ್ಯಕ್ರಮದಲ್ಲಿ ನೇರ ಪ್ರಸಾರದ ಸೇವೆಯನ್ನು ಮಾಡುವುದಲ್ಲದೆ ಇದೀಗ ಸಮಾಜ ಸೇವೆ ಮಾಡುವ ಉದ್ದೇಶವನ್ನೂ ಹೊಂದಿರುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ನಾಲ್ಕನೇ ಮೇಳದ ಪ್ರಧಾನ ಭಾಗವತರಾದ ಶ್ರೀಯುತ ಶ್ರೀನಿವಾಸ ಬಳ್ಳಮಂಜ ಇವರು ಕಳೆದ ವರ್ಷ ರಸ್ತೆ ಅಪಘಾತಕ್ಕೆ ಈಡಾಗಿದ್ದು, ಪರಿಣಾಮವಾಗಿ ಅವರ ಕಾಲಿಗೆ ಬಲವಾಗಿ ಪೆಟ್ಟು ಬಿದ್ದು ಒಂದು ವರ್ಷ ಮನೆಯಲ್ಲಿಯೇ ಉಳಿಯುವಂತಾಗಿತ್ತು. ಯಾವುದೇ ಆದಾಯವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಅದ್ಭುತ ಭಾಗವತರಾದ ಶ್ರೀನಿವಾಸ ಬಳ್ಳಮಂಜ ಇವರ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ವಿವಿಧ ಸದಸ್ಯರ ಸರ್ವಾನುಮತದ ಅಭಿಪ್ರಾಯದಂತೆ ಅವರಿಗೆ ಸಹಾಯಧನ ನೀಡುವ ಉದ್ದೇಶದಿಂದ ಯಕ್ಷ ರಿಶು ತಂಡ ಆಗಮಿಸಿ ದಿನಾಂಕ 22/05/2024 ರಂದು ಸಂಜೆ 7:00ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಶ್ರೀನಿವಾಸ ಬಳ್ಳಮಂಜ ಇವರನ್ನು ಸನ್ಮಾನ ಮಾಡಿ, ರೂಪಾಯಿ 40,000.00 ಧನಸಹಾಯವನ್ನು ಮಾಡಿರುತ್ತಾರೆ.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಹರಿನಾರಾಯಣ ದಾಸ್ ಅಸ್ರಣ್ಣರವರು ಶ್ರೀನಿವಾಸ ಬಳ್ಳಮಂಜ ಅವರನ್ನು ಸನ್ಮಾನಿಸಿ, ಆಶೀರ್ವದಿಸಿ, ಯಕ್ಷ ರಿಶು ತಂಡದ ಎಲ್ಲಾ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉದ್ಯಮಿ ಐಕಳ ಶ್ರೀ ಗಣೇಶ್ ಶೆಟ್ಟಿ, ಸ್ಥಳೀಯ ಉದ್ಯಮಿ ಶ್ರೀ ನಾರಾಯಣ ಶೆಟ್ಟಿಗಾರ್ ಭಟ್ಟಕೋಡಿ, ತಂಡದ ಮುಖ್ಯಸ್ಥರಾದ ಪ್ರೇಮನಾಥ ಪೂಜಾರಿ ಕಿನ್ನಿಗೋಳಿ, ಕಟೀಲು 4ನೇ ಮೇಳದ ಪ್ರಬಂಧಕರಾದ ಶ್ರೀ ಪ್ರಕಾಶ್ ಶೆಟ್ಟಿ, ಸಲಹೆಗಾರರು ಹಾಗೂ ವಕೀಲರಾದ ಚಂದ್ರಶೇಖರ್ ಎಂ ಅಮೀನ್, ಪೆರಾರ, ಸದಸ್ಯರಾದ ಜಯರಾಮ್ ಶೆಟ್ಟಿ ಸಾಲೆತ್ತೂರು, ಶ್ರೀ ವೆಂಕಟರಮಣ ಫಿಟ್ಟರ್ ಭಟ್ಟಕೋಡಿ, ಶ್ರೀ ಹೇಮಚಂದ್ರ ಶೆಟ್ಟಿಗಾರ್ ಭಟ್ಟಕೋಡಿ, ಶಶಿರಾಜ್ ಕಟೀಲು, ಯಕ್ಷ ಅಭಿಮಾನಿ ಶ್ರೀ ಸುನಿಲ್ ಬಂಗೇರ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.



