
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ-ಕಿನ್ನಿಗೋಳಿ ಹೆದ್ದಾರಿಯ ಸಮೀಪದ ಬೊಳ್ಳೂರು ಜಂಕ್ಷನ್ ಬಳಿಯ ಬಶೀರ್ ಮಾಲಿಕತ್ವದ ಅಂಗಡಿಯ ಎರಡು ಬೀಗ ಮುರಿದು ಕಳ್ಳರ ಡ್ರಾವರ್ ನಲ್ಲಿದ್ದ ರೂಪಾಯಿ 15 ಸಾವಿರ ನಗದು ಹಾಗೂ ಚಾಕೋಲೇಟ್ ಐಸ್ ಕ್ರೀಮ್ ನ್ನು ಬುಧವಾರ ರಾತ್ರಿ ಕಳವು ಮಾಡಿದ್ದಾರೆ.
ಈ ನಡುವೆ ಅಂಗಡಿ ಒಳಗೆ ಕಳ್ಳರು ರಾತ್ರಿ ಹೊತ್ತಿನಲ್ಲಿ ಸೋಡಾ ಹಾಗೂ ಬಿಸ್ಕೆಟ್ , ಐಸ್ ಕ್ರೀಮ್ ಕೂಡ ತಿಂದು ಮಜಾ ಮಾಡಿ ಅಲ್ಲಲ್ಲಿ ಬಿಸಾಡಿದ್ದಾರೆ
ಈ ಅಂಗಡಿಯಲ್ಲಿ ಎರಡನೇ ಬಾರಿ ಕಳ್ಳತನಕ್ಕೆ ಯತ್ನ ನಡೆದಿದ್ದು ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಂಗಡಿ ಮಾಲೀಕ ಬಶೀರ್ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಳೆಗಾಲ ಸಮೀಪಿಸುತ್ತಿದ್ದಂತೆ ಮುಲ್ಕಿ ಪರಿಸರದಲ್ಲಿ ಕಳ್ಳರ ಹಾವಳಿ ಶುರುವಾಗಿದ್ದು ರಾತ್ರಿ ಹೊತ್ತು ಗಸ್ತು ಹೆಚ್ಚಿಸುವಂತೆ ಹಳೆಯಂಗಡಿ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಮುಲ್ಕಿ ಪೊಲೀಸರನ್ನು ಒತ್ತಾಯಿಸಿದ್ದಾರೆ.



