ಮೂಲ್ಕಿ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ 200 ಮೀಟರ್ ವರೆಗೆ ಮುಳುಗಿ ವಾಹನ ಸವಾರರು ಸಂಕಷ್ಟ ಪಡುವಂತಾಯಿತು.

ಮೂಲ್ಕಿಯಿಂದ ಕೊಲ್ನಾಡ್ ಕಡೆ ಹೋಗುವಲ್ಲಿ ಪ್ರತೀ ಬಾರಿ ಮಳೆ ಬಂದಾಗ ಹೆದ್ದಾರಿಯಲ್ಲಿ ಹಲವು ಅಡಿ ನೀರು ನಿಂತು ನದಿಯಂತಾಗುತ್ತಿದೆ. ಹೆದ್ದಾರಿ ಅಧಿಕಾರಿಗಳು ಇತ್ತ ಗಮನಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ನಿನ್ನೆ ಹೆದ್ದಾರಿಯಲ್ಲಿ ನೀರು ನಿಂತಿರುವುದು ಕಾಣದೆ ಕಾರ್ ಗಳು ಅಪಘಾತಕ್ಕೀಡಾದರೆ ಹೊರರಾಜ್ಯದ ಕಾರ್ ಗಳು ಕೆಟ್ಟು ನಿಂತ ಘಟನೆಯೂ ನಡೆಯಿತು.



