ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಮೊಗೇರ ಸಮುದಾಯದವರಿಂದ ವಿಶೇಷ ನಾಗರಾಧನೆ

ಉಡುಪಿ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲೊಟ್ಟು ಗುತ್ತು ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳುವಿನ ಬೇಷ ತಿಂಗಳಲ್ಲಿ ನಡೆಯುವ ಪರಿಶಿಷ್ಟವರ್ಗದ ನಾಗರಾಧನೆ ಪೂಜೆಯು ವಿಶಿಷ್ಟ ರೀತಿಯಲ್ಲಿ ನಡೆಯಿತು.


ವಿವಿಧ ಜಿಲ್ಲೆಗಳ ಪರಿಶಿಷ್ಟವರ್ಗದ ಮೊಗೇರ ಸಮುದಾಯದವರಿಂದ ಆರಾಧಿಸಲ್ಪಡುವ ಈ ನಾಗಬನದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುವುದು ಅನಾದಿ ಕಾಲದಿಂದ ನಡೆದುಬಂದ ಸಂಪ್ರದಾಯವಾಗಿದೆ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿಯಂತಹ ಪರ್ವದಿನದಲ್ಲಾಗಲೀ, ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಪೂಜೆಗೆ ಅವಕಾಶವಿಲ್ಲ.
ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು, ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದ
ಪುರಾತನ ಸಂಪ್ರದಾಯದಂತೆ ಕಾಸರಗೋಡಿನಿಂದ ಕಾರವಾರದವರೆಗಿನ ವಿವಿಧ ಜಿಲ್ಲೆಗಳಿಂದ ಬಂದ ಮೊಗೇರ ಸಮುದಾಯದ ಭಕ್ತರು ಬೆಳಿಗ್ಗೆ ಮೂಲೊಟ್ಟು ಗುತ್ತು ಮೂಲ ಮನೆಗೆ ತೆರಳಿ ಬಾವಿಯ ನೀರು ಕುಡಿದು ಪೂಜೆ ಸಲ್ಲಿಸಿದ ಬಳಿಕ ನಾಗಬನವನ್ನು ಶುಚಿಗೊಳಿಸಿ ಮಣ್ಣಿನ – ಮಡಕೆಯಲ್ಲಿ ತಯಾರಿಸುವ ನಾಗನ ಬಿಂಬದಲ್ಲಿ ನಾಗಾರಾಧನೆಯ ಪೂಜೆ ನಡೆಯುತ್ತದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!