ಕಿನ್ನಿಗೋಳಿ : ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿಗ ಭದ್ರಕಾಳಿ ಸನ್ನಿಧಿಯ ಶ್ರೀ ಕ್ಷೇತ್ರದ ವಾರ್ಷಿಕ ನೇಮೋತ್ಸವ ಪ್ರಯುಕ್ತ ಸಂಧ್ಯಾ ಪೂಜಾರಿ ಬಂಟ್ವಾಳ ವೀರಚಿತ ಅಬ್ಬರದ ಗಗ್ಗರ ಎಂಬ ತುಳು ಯಕ್ಷಗಾನವನ್ನು ಕೊಡೇತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕೊಡೇತ್ತೂರು ಅರಸು ಕುಂಜರಾಯ ದೈವಸ್ಥಾನದ ಮುಕ್ಕಾಲ್ದಿ ಶ್ರೀ ಜಯರಾಮ್ ಮುಕ್ಕಾಲ್ದಿ ಶ್ರೀ ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು ಭಾಗವತರಾದ ದಯಾನಂದ ಕೋಡಿಕಲ್ ವಸಂತ ಪೂಜಾರಿ ಧರ್ಮದರ್ಶಿ ಹರೀಶ್ ಪೂಜಾರಿ ಪ್ರಸಂಗ ಕರ್ತೆ ಸಂಧ್ಯಾ ಪೂಜಾರಿ ದರ್ಬೆ ಬಂಟ್ವಾಳ ಜಯಂತಿ ಬಂಟ್ವಾಳ ಕಾರ್ಯಕ್ರಮವನ್ನು ಸಂಜೀವ ಕಜೆ ಪದವು ಸ್ವಾಗತಿಸಿದರು ಪ್ರಕಾಶ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು



