ಮುಲ್ಕಿ: ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಪ್ರಾಯೋಜಕತ್ವದಲ್ಲಿ,
ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು, ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಜಂಟಿ ಆಶ್ರಯದಲ್ಲಿ ಆಕ್ಯುಪ್ರೆಷರ್ ಮತ್ತು ಸುಜೋಕ್ ಮ್ಯಾಗ್ನೆಟ್, ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ//.ರಾಮ್ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ ಹನುಮಾನ್ ಗಡ ರಾಜಸ್ಥಾನ ಇದರ ಅಕ್ಯೂಪ್ರೆಷರ್ ಥೆರಪಿಸ್ಟ್
ರೂಪಾರಾಮ್, ಪ್ರಹ್ಲಾದ್ ಮತ್ತು ಲೂನಾರಾಮ್, ಪಡುಪಣಂಬೂರುಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಚಂದ್ರಶೇಖರ್, ನೆಹರು ಯುವ ಕೇಂದ್ರ ಮಂಗಳೂರು ಇಲ್ಲಿನ ಆಡಳಿತಾಧಿಕಾರಿ ಶ್ರೀ ಜಗದೀಶ್ ಎನ್, ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಅಧ್ಯಕ್ಷರಾದ ಸದಾಶಿವ ಕುಂದರ್, ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಗಣೇಶ್ ಜಿ ಬಂಗೇರ, ನಿಕಟ ಪೂರ್ವ ಅಧ್ಯಕ್ಷರಾದ ದಿನಕರ್ ಸಾಲ್ಯಾನ್, ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಬಿ ದೇವಾಡಿಗ ಫೇಮಸ್ ಯೂತ್ ಕ್ಲಬ್ ನ ಗೌರವಾಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು ಮತ್ತು ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಥೆರಪಿಸ್ಟ್ ಗಳಾದ ಶ್ರೀ ರೂಪಾರಾಮ್, ಶ್ರೀ ಪ್ರಹ್ಲಾದ್ ಮತ್ತು ಶ್ರೀ ಲೂನಾರಾಮ್ ರವರ ಉತ್ತಮ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಶಿಬಿರಾರ್ಥಿಗಳಾದ ಶ್ರೀ ಚಂದ್ರಶೇಖರ್, ದಿನಕರ್ ಸಾಲ್ಯಾನ್, ಮತ್ತು ಶ್ರೀಮತಿ ರತ್ನ ತಮ್ಮ ಶಿಬಿರದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಅಮೀನ್ ರವರು ಪ್ರಾಸ್ತಾನವಿಕ ಮಾತಿನೊಂದಿಗೆ ಸ್ವಾಗತವನ್ನು ನೆರವೇರಿಸಿ ಕೊಟ್ಟರು,ಹಿಮಕರ್ ಕೋಟ್ಯಾನ್ ರವರು ಧನ್ಯವಾದವನ್ನು ಅರ್ಪಿಸಿ, ಮಹಮ್ಮದ್ ಶರೀಫ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.



