ಪುತ್ತೂರು: ತಾಲೂಕಿನ ಮಾಜಿ ನಗರಾಭಿವೃದ್ಧ ಸಚಿವ ವಿನಯ ಕುಮಾರ್ ಸೊರಕೆ ಅವರ ತಾಯಿ, ದಿ. ಅಚ್ಯುತ್ತ ಪೂಜಾರಿಸೊರಕೆಯವರ ಪತ್ನಿ ಸುನೀತಿ ಅಚ್ಯುತ್ತ ಸೊರಕೆ (91) ರವರು ಜು.8 ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಅಶೋಕ್ ಕುಮಾರ್ ಸೊರಕೆ, ಮಾಜಿ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪುತ್ರಿಯರಾದ ಶಶಿಕಲಾ, ಶರತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1:30ಕ್ಕೆ ಸೊರಕೆ ಸಮೀಪದ ಪುತ್ತೂರು ತಾಲೂಕಿನ ಸರ್ವೆ ಗ್ರಾಮದಲ್ಲಿ ನಡೆಯುವುದಾಗಿ ತಿಳಿಸಿದ್ದಾರೆ.



