ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ ಪತ್ರಕ್ಕಾಗಿ ಎರಡು ದಿನದಲ್ಲಿ ಬರೋಬ್ಬರಿ ಒಂಭತ್ತು ಬಾರಿ ವ್ಯಕ್ತಿಯೊಬ್ಬರನ್ನು ಅಲೆದಾಡಿಸಿದ ಪಟ್ಟಣ ಪಂಚಾಯತ್ ಮಹಿಳಾ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜೂ.5 ರಂದು ಸಂಜೆ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.ಈ ಕುರಿತ ಮಾತಿನ ಚಕಮಕಿಯ ವೀಡಿಯೋ ವೈರಲ್ ಆಗಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಿರೀಶ್ ಕೋಡಿಬೈಲು ಅವರು ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯುವ ಸಲುವಾಗಿ ಬ್ಯಾಂಕ್ ಗೆ ಅಗತ್ಯ ದಾಖಲೆ ಪತ್ರ ಸಲ್ಲಿಸಬೇಕಾಗಿತ್ತು. ಪ.ಪಂ ನಿಂದ ನೀಡುವ ನಮೂನೆ 3 ದಾಖಲೆಯೊಂದರಲ್ಲಿ ಸಿಬ್ಬಂದಿಗಳ ಬೇಜವ್ದಾರಿಯಿಂದ ರಸ್ತೆ ದಿಕ್ಕನ್ನು ತಪ್ಪಾಗಿ ನಮೂದಿಸಿದ್ದರು . ಹೀಗಾಗಿ ಕೂಡಲೇ ಸರಿಪಡಿಸಿಕೊಂಡು ಬರುವಂತೆ ಬ್ಯಾಂಕ್ ನಲ್ಲಿ ಹೇಳಿದ್ದರು. ಈ ಬಗ್ಗೆ ಪಟ್ಟಣ ಪಂಚಾಯತ್ ನಲ್ಲಿ ಮಂಗಳವಾರ ಮುಂಜಾನೆ ವಿಚಾರಿಸಿದ ವಿವಿಧ ಸಮಯ ನೀಡಿ ನಾಲ್ಕು ಬಾರಿ ಅಲೆದಾಡಿಸಿ ಮರುದಿನ ಬರುವಂತೆ ಮಹಿಳಾ ಸಿಬ್ಬಂದಿ ( ಬಿಲ್ ಕಲೆಕ್ಟರ್) ಹೇಳಿದ್ದರು, ಅಲ್ಲದೆ ತೆರಿಗೆಯನ್ನು ಪಾವತಿಸಲು ತಿಳಿಸಿದಂತೆ ಹಣ ಪಾವತಿಸಿದ್ದರು . ಬುಧವಾರವೂ ಕಚೇರಿಗೆ ಹೋಗಿ ವಿಚಾರಿಸಿದಾಗ ಮತ್ತೆ ಬೇರೆ ಬೇರೆ ಸಮಯ ನೀಡಿ ಐದು ಬಾರಿ ಅಲೆದಾಡಿಸಿ ಒಟಿಪಿ ಬಾರದೆ ಆಗುವುದಿಲ್ಲ ಎಂದು ಹೇಳಿ ಗುರುವಾರ ಬರುವಂತೆ ಮಹಿಳಾ ಸಿಬ್ಬಂದಿ ಸೂಚಿಸಿದ್ದರು.
ದಾಖಲೆಗಾಗಿ ಬಂದ ವ್ಯಕ್ತಿ ಅಳುತ್ತಾ ಹೋದ್ರು: ಬ್ಯಾಂಕ್ ಗೆ ನಿಗದಿತ ಸಮಯದಲ್ಲಿ ದಾಖಲೇ ಪತ್ರ ಸಲ್ಲಿಸಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಅಲೆದಾಟ ಮಾಡಿ ನೊಂದ ಗಿರೀಶ್ ಅವರು ದಿಕ್ಕು ತೋಚದೆ ಅಳುತ್ತಾ ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ ಗಮನಕ್ಕೆ ತಂದಿದ್ದರು. ಬುಧವಾರ ಸಂಜೆ ಕಚೇರಿಗೆ ಹೋಗಿ ವಿಚಾರಿಸಿದಾಗ ಉಡಾಫೆಯಿಂದ ಮಾತನಾಡಿದನ್ನು ಗಮನಿಸಿ ರಾಘವ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹಣ ಕೊಟ್ಟರೆ ಒಂದೇ ದಿನದಲ್ಲಿ ದಾಖಲೆ ಪತ್ರ ನೀಡುವ ನೀವು ಬಡವರನ್ನು ಸತಾಯಿಸುತ್ತಿರುವುದಾಗಿ ಏರು ಧ್ವನಿಯಲ್ಲಿ ಮಾತನಾಡಿ ಇಂದೇ ಕೊಡುವಂತೆ ಪಟ್ಟು ಹಿಡಿದರು. ಈ ವೇಳೆ ಮರು ಜಿಪಿಎಸ್ ಮಾಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದು ಇದರಿಂದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಹಣ ಬೇಕಿದ್ದರೆ ಹೇಳಲಿ ಒಳ್ಳೆಯ ಜಾಗದಲ್ಲಿ ತಂದು ಕೊಡುತ್ತೇನೆ ಎಂದು ಹೇಳುವುದು ವೀಡಿಯೋದಲ್ಲಿದೆ.
ಮನೆಗೆ ಹೋದ ಸಿಬ್ಬಂದಿಯನ್ನುಕಚೇರಿಗೆ ಸಿಒ ಕಾರು ಕಳುಹಿಸಿದ್ರು: ಪಟ್ಟಣ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾರಣ ದಿಕ್ಕು ತೋಚದೆ ಇವತ್ತೆ ಮಾಡಿಕೊಡುವ ಭರವಸೆ ನೀಡಿದರು. ಇದರಿಂದ ಸಾಯಂಕಾಲ ಮನೆಗೆ ಹೋಗಿದ್ದ ಬಿಳಿನೆಲೆಯ ಮತ್ತೋರ್ವ ಮಹಿಳಾ ಸಿಬ್ಬಂದಿಯನ್ನು ಬರ ಹೇಳಿದ್ದರು.ಹೀಗಾಗಿ ತುರ್ತಾಗಿ ಮುಖ್ಯಾಧಿಕಾರಿಯ ಕಾರನ್ನು ಬಿಳಿನೆಲೆಗೆ ಕಳುಹಿಸಿ ಸಂಜೆ ಸುಮಾರು 7:15ರ ಹೊತ್ತಿಗೆ ಕಚೇರಿಗೆ ಸಿಬ್ಬಂದಿ ಆಗಮಿಸಿದರು. ನಂತರ ಸರಿ ಸುಮಾರು 8:00ಯ ಹೊತ್ತಿಗೆ ತಿದ್ದುಪಡಿಗೊಂಡ ನಮೂನೆ 3 ದಾಖಲೆ ಪತ್ರವನ್ನು ಯಾವುದೇ ಒಟಿಪಿ ಇಲ್ಲದೆ,ಜಿಪಿಯಸ್ ಮಾಡದೆ ಸಿದ್ದಪಡಿಸಿ ನೀಡಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…