ಬೆಳಗ್ಗೆ ಎದ್ದು ಮೊದಲು ಕುಡಿಯುವುದೇ ಚಹಾ. ಇದನ್ನು ಕುಡಿದ ಮೇಲೆ ಸಾಕಷ್ಟು ಜನರು ಮುಂದಿನ ಕೆಲಸ ಮಾಡಲು ಶುರು ಮಾಡ್ತಾರೆ. ಮನೆಯಲ್ಲಿ ಟೀ ಕುಡಿದಿಲ್ಲ ಎಂದರೂ ಬಿದಿ ಬದಿಯ ಅಂಗಡಿಗಳಲ್ಲಿ ಕುಡಿಯುವುದು ಅಭ್ಯಾಸ ಆಗಿ ಬಿಟ್ಟಿದೆ. ಈ ರೀತಿ ಹೊರಗೆ ಟೀ ಕುಡಿಯುವ ಮುನ್ನ ಕೊಂಚ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ ಚಹಾಗೆ ಹಾಕುವ ಪುಡಿಗಳಿಂದಲೂ ನಮ್ಮ ಜೀವಕ್ಕೆ ಆಪತ್ತು ಕಾದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುವ ಟೀ ಪುಡಿಗಳಿಂದಲೂ ಅಪಾಯ ಕಾದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಚಹಾ ಸಿಗುತ್ತದೆ ಎಂದು ಕುಡಿದರೆ ಪ್ರಾಣಕ್ಕೆ ಆಪತ್ತು ಇದೆ. ಟೀ ಪುಡಿ ಅಷ್ಟೇ ಅಲ್ಲ, ಸಾಂಬಾರ್ ಪುಡಿಗಳಿಂದಲೂ ಭಾರೀ ಅಪಾಯ ನಮಗೆಲ್ಲ ಕಾದಿದೆ. ಹೀಗಂತ ಹೇಳುತ್ತಿರುವುದು ನಾವಲ್ಲ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಹೇಳಿದ್ದಾರೆ.
ಟೀ ಪುಡಿಗಳ ಪ್ರತಿಷ್ಠಿತ ಕಂಪನಿಗಳಿಂದಲೇ ಸದ್ಯಕ್ಕೆ ಯಡವಟ್ಟು ಆಗುತ್ತಿದೆ. ಇದು ಒಂದೋ, ಎರಡೋ ಕಂಪನಿಗಳಿಂದ ಈ ರೀತಿ ಆಗುತ್ತಿಲ್ಲ. 10ಕ್ಕೂ ಹೆಚ್ಚು ಚಹಾ ಕಂಪನಿಗಳಿಂದ ಸಮಸ್ಯೆ ಆಗುತ್ತಿದೆ. ಯಾವುದೇ ಪ್ರಾಡಕ್ಟ್ ಬ್ರ್ಯಾಂಡ್ ಹೆಸರಲ್ಲಿ ರಿಜಿಸ್ಟರ್ ಆಗುವಾಗ ಯಾವ ಪ್ರಮಾಣದಲ್ಲಿ ಅದರಲ್ಲಿ ಸಾಮಾಗ್ರಿಗಳನ್ನು, ಕೆಮಿಕಲ್ಗಳನ್ನ, ಕಲರ್ಗಳನ್ನ ಹಾಕಲಾಗುತ್ತದೆ ನಮೂದು ಮಾಡಿಸುತ್ತಾರೆ. ಆದರೆ ಮಾಲೀಕರು ತನ್ನ ಬ್ರ್ಯಾಂಡ್ ಮೂಲವನ್ನು ಉಳಿಸಿಕೊಳ್ಳುವುದು ಕರ್ತವ್ಯ ಆಗಿರುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬ್ರ್ಯಾಂಡ್ನ ವಸ್ತು ಕಳಪೆ ಆಗಿ ಬಿಡುತ್ತದೆ. ಇಂತಹ ಬ್ರ್ಯಾಂಡ್ ವಸ್ತುಗಳನ್ನು ಬಳಸುವುದು ಅಪಾಯ ಆಗಿರುತ್ತೆ ಎಂದಿದ್ದಾರೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…