ಶಿವಮೊಗ್ಗದಲ್ಲಿ ಮತ್ತೆ ಇಸ್ಪಿಟ್ ದಂಧೆ ಪ್ರಾರಂಭವಾಗಿದೆ ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ದೀಪು ಶೆಟ್ಟಿಗಾರ್ ಆಗ್ರಹಿಸಿದ್ದಾರೆ.

ಶಿವಮೊಗ್ಗ ಜೂಜು ಮುಕ್ತಗೊಳಿಸಿ ಎನ್ನು ದೀಪು ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾಯಿದೆ. ಈ ವಿಡಿಯೋದಲ್ಲಿ ಶಿವಮೊಗ್ಗದಲ್ಲಿ ಇಸ್ಪಿಟ್ ದಂಧೆಯನ್ನು ಒರ್ವ ರಾಜಕಾರಣಿಯ ಮಗ ನಡೆಸ್ತಾ ಇದ್ದಾನೆ ಎಂದು ಹೇಳಿದ್ದಾರೆ. ಭದ್ರಾವತಿ 11ಕಡೆ, ಹೊಳೆಹೊನ್ನೂರು, ಕೂಡ್ಲಿಗೆರೆ, ಉದ್ದಂಜನೆಯ ದೇವಸ್ಥಾನ ಪಕ್ಕದಲ್ಲಿ 20 ಕಡೆಗಳಲ್ಲಿ ದಂಧೆ ನಡೆಯುತ್ತಿದೆ. ಚುನಾವಣೆ ನಂತರ ಮತ್ತೆ ಜೂಜು ಆರಂಭವಾಗಿದೆ. ಕಾನೂನು ಕಾಪಾಡಬೇಕಿದ್ದ ಪೊಲೀಸರೇ ರಾಜಕಾರಣಿಯ ಮಗನಿಗೆ ಸಪೋರ್ಟ್ ಮಾಡ್ತಾರೆ. ಸನ್ಮಾನ ಮಾಡ್ತಾರೆ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.



