ವಿಟ್ಲ: ತೋಟಕ್ಕೆ ಹೋಗಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ತೋಟದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜೂ. 6ರಂದು ಕನ್ಯಾನ ಗ್ರಾಮದ ಪರಕಜೆಯಲ್ಲಿ ನಡೆದಿದೆ.

ಕನ್ಯಾನ ಪರಕಜೆ ನಿವಾಸಿ ಬಾಲಕೃಷ್ಣ ಭಂಡಾರಿ(56) ಮೃತಪಟ್ಟವರು. ಅವರು ಜೂ. 6ರ ಮಧ್ಯಾಹ್ನ 3ರ ಸುಮಾರಿಗೆ ತೋಟಕ್ಕೆ ಹೋಗಿದ್ದಾರೆ. ರಾತ್ರಿ 10ರ ಸುಮಾರಿಗೆ ಹುಡುಕಾಡಿದಾಗ ಅವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಸುಮಾರು 10 ಅಡಿ ಆಳದ ಕೆರೆಗೆ ಇಳಿಯಲು ಮಾಡಿದ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ನೀರಿನಲ್ಲಿ ಉಸಿರುಕಟ್ಟಿ ಮೃತಪಟ್ಟಿರುವುದಾಗಿ ಅವರ ಅಣ್ಣನ ಪುತ್ರ ಅಶೋಕ್ ಪಿ. ದೂರು ನೀಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



