ಮಾನ್ಯ ಪೌರಾಯುಕ್ತರಾದ ಶ್ರೀ ಬದ್ರುದ್ದೀನ್ ಸೌದಾಗರ್ ಇವರು ಚುನಾವಣಾ ಸಂದರ್ಭ ಸರಕಾರದ ಆದೇಶದನ್ವಯ ಪುತ್ತೂರು ನಗರಸಭೆಗೆ ವರ್ಗಾವಣೆಗೊಂಡು ಬಂದಿದ್ದು, ಸದ್ರಿಯವರು ಅವರ ಮೂಲಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಪುತ್ತೂರು ನಗರಸಭಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ ಸಮಾರಂಭವನ್ನು 07 ರಂದು ಏರ್ಪಡಿಸಲಾಯಿತು.

ಪುತ್ತೂರು ನಗರಸಭಾ ಸಭಾಂಗಣದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರ್ಗಾಪ್ರಸಾದ್, ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕರುಣಾಕರ್ ವಿ, ಪದಾಧಿಕಾರಿಗಳು ಮತ್ತು ಸಹಾಯಕ ಅಭಿಯಂತರರಾದ ಶ್ರೀ ಕೃಷ್ಣಮೂರ್ತಿ ರೆಡ್ಡಿ, ನಗರಸಭಾ ಸದಸ್ಯರಾದ ಶ್ರೀ ಯೂಸುಫ್ ಹಾಗೂ ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. ಸದ್ರಿ ಸಂದರ್ಭ ಮಾನ್ಯ ಪೌರಾಯುಕ್ತರಿಗೆ ಸನ್ಮಾನ ಮಾಡಲಾಯಿತು. ಸಿಬ್ಬಂದಿಗಳು ಪೌರಾಯುಕ್ತರ ಕುರಿತು ಮಾತನಾಡಿ ಸದ್ರಿಯವರ ಗುಣಗಾನ ಮಾಡಿ ಶುಭಹಾರೈಸಿದರು ಹಾಗೂ ಪೌರಾಯುಕ್ತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಖಜಾಂಜಿ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ ವಂದನಾರ್ಪಣೆ ಮಾಡಿದರು.



