ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ಶಿರಸಿ ಮೂಲದ ಕೇಶವ ಹೆಗಡೆ ನಿಧನಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ, ಆಂಧ್ರದಲ್ಲಿ ಹಿಂದೂ ಜನಜಾಗೃತಿ ಆಂದೋಲನ, ಉಡುಪಿಯಲ್ಲಿ ನಡೆದ ವಿರಾಟ್ ಸಮಾಜೋತ್ಸವ, 2019ರಲ್ಲಿ ನಡೆದ ಧರ್ಮ ಸಂಸತ್, ಗೋ ರಕ್ಷಾ ಚಳವಳಿ, ಮತಾಂತರ ವಿರೋಧಿ ಹೋರಾಟ, ಅಸ್ಪೃಶ್ಯತಾ ವಿರೋಧಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಕೇಶವ ಹೆಗಡೆ ಶ್ರೀಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಹಿಂದುತ್ವಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದು ಮೃತರ ಆತ್ಮಕ್ಕೆ ಶ್ರೀಕೃಷ್ಣ ಮುಖ್ಯಪ್ರಾಣರು ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ಶ್ರೀಗಳು ತಿಳಿಸಿದ್ದಾರೆ.



