ನವದೆಹಲಿ: ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಆರ್ಥಿಕ ಹೊರೆಯಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಪಾಕವಿಧಾನಗಳಲ್ಲಿ ಅವುಗಳನ್ನು ಸೇರಿಸಲು ಹೆಣಗಾಡುತ್ತಿವೆ. ಇದರ ಪರಿಣಾಮ ಹೋಟೆಲ್, ರೆಸ್ಟೋರೆಂಟ್ ಹಾಗೂ ಢಾಬಾಗಳಲ್ಲಿನ ಆಹಾರದಲ್ಲಿ ಟೊಮೆಟೊ ಕಣ್ಮರೆಯಾಗಿರುವುದು ಕಂಡುಬಂದಿದೆ.
ಎಲ್ಲಾ ಹೋಟೆಲ್ಗಳಲ್ಲಿ ಆಹಾರದಿಂದ ಟೊಮೆಟೊಗಳು ಕಣ್ಮರೆಯಾಗುತ್ತಿವೆ. ಅಡುಗೆ ಭಟ್ಟರು ಲೆಕ್ಕಾಹಾಕಿ ಟೊಮ್ಯಾಟೋ ಹಣ್ಣುಗಳನ್ನು ಆಹಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ.
“ನಾವು ಮೊದಲು 20ರಿಂದ 25 ಕೆಜಿ ಟೊಮೆಟೊ ಬಳಸುತ್ತಿದ್ದೆವು. ಆದರೆ, ಈಗ ನಾವು 5ರಿಂದ 7 ಕೆಜಿ ಟೊಮೆಟೊ ಮಾತ್ರ ಬಳಕೆ ಮಾಡುತ್ತಿದ್ದೇವೆ. ಟೊಮೆಟೊ ತುಂಬಾ ದುಬಾರಿಯಾಗಿದೆ. ನಾವು ನಮ್ಮ ಢಾಬಾದಲ್ಲಿ ಬೆಲೆಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಭಕ್ಷ್ಯಗಳು ಇಲ್ಲದಿದ್ದರೆ ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ನಾವು ಈಗ ಟೊಮೆಟೊ ಬದಲಿಗೆ ಈರುಳ್ಳಿಯನ್ನು ಬಳಸುತ್ತಿದ್ದೇವೆ. ಇದರಿಂದ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ” ಹೇಳುತ್ತಾರೆ ಎಂದು ದೆಹಲಿಯ ಗೌತಮ್ ನಗರದ ಮಾಮಾ ಢಾಬಾದ ಬಾಣಸಿಗ ಸುನಿಲ್ ಕುಮಾರ್ ಯಾದವ್.



