ಬಂಟ್ವಾಳ: ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಯೋರ್ವರು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸಂಜೆ ಬಿಸಿರೋಡಿನಲ್ಲಿ ನಡೆದಿದೆ.

ದಾಸಕೋಡಿ ನಿವಾಸಿ ಅವಿವಾಹಿತ ಲೂಯಿಸ್ ಡಿ.ಸೋಜ ( 64) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಲೂಯಿಸ್ ಡಿ.ಸೋಜ ಅವರಿಗೆ ಕಾಲು ನೋವಿನ ಸಮಸ್ಯೆ ಇದ್ದು, ವೈದ್ಯರ ಬೇಟಿ ಮಾಡಿದರು ಔಷಧಿಗಾಗಿ ಬಿಸಿರೋಡಿಗೆ ಬಂದಿದ್ದರು.
ವೈದ್ಯರನ್ನು ಕಂಡು ವಾಪಸು ಮನೆಗೆ ತೆರಳುವುದಕ್ಕಾಗಿ ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣ ಬಳಿ ಹೋಟೆಲ್ ಮುಂಭಾಗದಲ್ಲಿ ನಿಂತುಕೊಂಡಿದ್ದರು.
ನಿಂತುಕೊಂಡಿದ್ದ ಇವರು ಒಮ್ಮೆಲೆ ಕೆಳಗೆ ಬಿದ್ದಿದ್ದು, ಇವರನ್ನು ಬಸ್ ಕಾಯುತ್ತಿದ್ದ ಪ್ರಯಾಣಿಕರು ಉಪಚರಿಸಿದ್ದಾರೆ.ಆದರೆ ಲೂಯಿಸ್ ಅದಾಗಲೇ ಮೂರ್ಚೆ ತಪ್ಪಿದ್ದರಿಂದ ಇವರನ್ನು ರಿಕ್ಷಾ ಚಾಲಕಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ನೇತ್ರತ್ವದಲ್ಲಿ ರಿಕ್ಷಾ ಚಾಲಕರು ಸೇರಿ 102 ಅಂಬ್ಯುಲೆನ್ಸ್ ನ್ನು ಕರೆಸಿ ಅದರ ಮೂಲಕ ಬಂಟ್ವಾಳ ಆಸ್ಪತ್ರೆಗೆ ಸೇರಿಸಿದ್ದರು. ಇವರ ಬಳಿ ಇದ್ದ ಮೊಬೈಲ್ ನಂ.ಪಡೆದು ಕುಟುಂಬದ ಸದಸ್ಯರನ್ನು ವಿಶ್ವನಾಥ ಅವರು ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಇವರು ಮೃತಪಟ್ಟ ಬಗ್ಗೆ ವರದಿ ನೀಡಿದ್ದಾರೆ.
ಬಿ.ಪಿ.ಕಡಿಮೆ ಆಗಿ ಬಿದ್ದು ಹೃದಯಾಘಾತದಿಂದ ಸಾವನ್ನಿಪ್ಪಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿದ್ದಾರೆ.



